Namma Metro: ಬೈಯ್ಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ ಯಶಸ್ವಿ: ಸೆಪ್ಟೆಂಬರ್ ನಲ್ಲಿ ಕಾರ್ಯಾಚರಣೆ ಆರಂಭ ಸಾಧ್ಯತೆ

Namma Metro: ಬೈಯಪ್ಪನಹಳ್ಳಿ – ಕೆಆರ್ ಪುರ ಮಾರ್ಗದ ಮೆಟ್ರೋ ಸುರಕ್ಷತ ಪರಿಶೀಲನೆ ಯಶಸ್ವಿ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ವಾಣಿಜ್ಯ ಚಾಲನೆಗೆ ಗ್ರೀನ್ ಸಿಗ್ನಲ್ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆಯಿದೆ, ಇಲ್ಲಿದೆ ಹೆಚ್ಚಿನ ಮಾಹಿತಿ.

Namma Metro

ಬೆಂಗಳೂರು: ಬಹು ನಿರೀಕ್ಷಿತ ಬೈಯಪ್ಪನಹಳ್ಳಿ – ಕೆಆರ್ ಪುರ ನೇರಳೆ ಮಾರ್ಗದ ಮೆಟ್ರೋ ಸುರಕ್ಷತಾ ಪರಿಶೀಲನೆಯಲ್ಲಿ ತೇರ್ಗಡೆಯಾಗಿದ್ದು, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ಅಧಿಕಾರಿಗಳು ವಾಣಿಜ್ಯ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ತಿಳಿದುಬಂದಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದ ಬಾಕಿ ಉಳಿದಿರುವ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಸುರಕ್ಷತಾ ಪರಿಶೀಲನೆ ಯಶಸ್ವಿಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್‌ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ್ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ; ಅಕ್ಟೋಬರ್‌ನಲ್ಲಿ ಚೀನಾದಿಂದ ನಮ್ಮ ಮೆಟ್ರೋಗೆ ಚಾಲಕ ರಹಿತ ಮೆಟ್ರೋ ರೈಲು: ಸಂಪೂರ್ಣ ವಿವರ ಇಲ್ಲಿದೆ

ಈ ಮಾರ್ಗ ವಾಣಿಜ್ಯ ಕಾರ್ಯಾಚರಣೆ ಸಿದ್ಧವಾಗಿದೆ!

Namma Metro

Image Credits: DeccanHerald.com

ನಮ್ಮ ಮೆಟ್ರೊ ನೇರಳೆ ಮಾರ್ಗದ ಭಾಗವಾಗಿರುವ ಬೈಯಪ್ಪನಹಳ್ಳಿ ಕೆಆರ್ ಪುರಂ ಮೆಟ್ರೊ ಮಾರ್ಗವನ್ನು ಗುರುವಾರ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ಸುರಕ್ಷತಾ ಪರಿಶೀಲನೆ ಬಳಿಕ ಮಾತನಾಡಿ, ‘ಬೈಯಪ್ಪನಹಳ್ಳಿ–ಕೆಆರ್ ಪುರಂ ಮೆಟ್ರೊ ನಿಲ್ದಾಣದ ನಡುವೆ ನೂತನವಾಗಿ ರೂಪಿಸಿರುವ ಮಾರ್ಗದ ಕಾಮಗಾರಿ ತುಂಬಾ ಚೆನ್ನಾಗಿದೆ. ಸುಸಜ್ಜಿತವಾಗಿದೆ ಮತ್ತು ಶಾಸನಬದ್ಧ ಸುರಕ್ಷತಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸವನ್ನು ಪೂರ್ಣಗೊಳಿಸಲಾಗಿದೆ ಆದ್ದರಿಂದ ಈ ಮಾರ್ಗವು ಸುರಕ್ಷಿತವಾಗಿದೆ.ಮೆಟ್ರೋ ವಾಣಿಜ್ಯ ಕಾರ್ಯಾಚರಣೆಗೆ ಸೂಕ್ತವಾಗಿದೆ, ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಕೆಆರ್ ಪುರಂ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್ ಸಿಎಲ್ ಸಕಲ ಸಿದ್ಧತೆ ನಡೆಸಿದ್ದು, ಸುರಕ್ಷತಾ ಪ್ರಮಾಣ ಪತ್ರ ದೊರೆತ ಕೂಡಲೇ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್ ಸಿಎಲ್ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ; ಬಿಪಿಎಲ್ ಕಾರ್ಡ್​​ದಾರರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ; ಇಲ್ಲಿದೆ ಸಂಪೂರ್ಣ ವಿವರ

ಕೆಂಗೇರಿ-ಚಲ್ಲಘಟ್ಟ ಮಾರ್ಗದ ಕಾರ್ಯಾಚರಣೆ ವಿಳಂಬ!

ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚೆಲ್ಲಘಟ್ಟ ಮಾರ್ಗಗಳ ಕಾರ್ಯಾಚರಣೆಯನ್ನು ಏಕಕಾಲಕ್ಕೆ ಪ್ರಾರಂಭಿಸಲು ಗುರಿ ಹೊಂದಿತ್ತು ಆದರೆ ಭದ್ರತಾ ತಪಾಸಣೆ ಮತ್ತು ಇತರ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ.

ಆದ್ದರಿಂದ ಈಗಾಗಲೇ ಯಶಸ್ವಿಯಾಗಿ ಪರಿಶೀಲನೆ ನಡೆಸಿರುವ ಬೈಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೊ ಮಾರ್ಗದ ಕಾಮಗಾರಿ ಸೆಪ್ಟೆಂಬರ್ ಅಂತ್ಯದೊಳಗೆ ಆರಂಭವಾಗಲಿದ್ದು, ಮುಂದಿನ 15ರಿಂದ 30 ದಿನಗಳಲ್ಲಿ ಕೆಂಗೇರಿ-ಚೆಲ್ಲಘಟ್ಟ ಮಾರ್ಗವನ್ನು ಸಿಎಂಆರ್ ಎಸ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಮತ್ತು ಸುರಕ್ಷತಾ ಪ್ರಮಾಣಪತ್ರದ ನಂತರ, ಈಮಾರ್ಗದ ವಾಣಿಜ್ಯ ಕಾರ್ಯಾಚರಣೆಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

Latest Trending

Follow us on Instagram Bangalore Today

Leave a Reply

Your email address will not be published. Required fields are marked *