Koramangala Pg Girl Murder Case: ಬೆಂಗಳೂರಿನ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

Koramangala Pg Girl Murder Case: ಕೋರಮಂಗಲದ ವೆಂಕಟಶಿವಾರೆಡ್ಡಿ ಲೇಔಟ್ ನಲ್ಲಿರುವ ಭಾರ್ಗವಿ ಪೇಯಿಂಗ್ ಗೆಸ್ಟ್ ಫಾರ್ ಲೇಡೀಸ್ (ಪಿಜಿ) ನಲ್ಲಿ ಜುಲೈ 23ರ ರಾತ್ರಿ ಕೋರಮಂಗಲದ ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್ ಕೊಲೆ ನಂತರ ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಪೊಲೀಸರು ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದ್ದು  ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Koramangala Pg Girl Murder Case

ಬೆಂಗಳೂರು: ನಗರದ ಕೋರಮಂಗಲದ ಲೇಡೀಸ್ ಪಿಜಿಯಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿಯೊಬ್ಬಳ ಘನಘೋರ ಹತ್ಯೆಯ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜು. 23ರ ರಾತ್ರಿ 11.30ರ ಸುಮಾರಿಗೆ ಪಿಜಿಯೊಳಗೆ ನುಗ್ಗಿದ್ದ ಹಂತಕ 3ನೇ ಮಹಡಿಯ ಕೊಠಡಿ ಬಳಿಗೆ ಬಂದು ಬಿಹಾರ ಮೂಲದ ಕೃತಿ ಕುಮಾರಿ (24) ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋಇಚ್ಛೆ ಚಾಕುವಿನಿಂದ ಇರಿದು ಯುವತಿಯು ಜೋರಾಗಿ ಕಿರುಚಿಕೊಂಡರೂ ಪಿಜಿಯಲ್ಲಿದ್ದ ಯಾರೂ ಆಕೆಯ ಸಹಾಯಕ್ಕೆ ಬಂದಿರಲಿಲ್ಲ. ಅತ್ತ, ಹಂತಕ, ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಎದೆಯ ಭಾಗಗಲ್ಲಿ ಮನಬಂದಂತೆ ಇರಿದು ಆಕೆ ಕುಸಿದುಬಿದ್ದ ನಂತರ ಅಲ್ಲಿಂದ ಓಡಿಹೋಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಕೃತಿ ಕುಮಾರಿ, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯ ಪ್ರದೇಶಕ್ಕೆ ಹೋಗಿದ್ದ ಆರೋಪಿಯನ್ನು ಅಲ್ಲೇ ಬಂಧಿಸಿದ್ದಾರೆ.

ಇದನ್ನೂ ಓದಿ:  KRS ಬೃಂದಾವನ ಮೇಕ್ ಓವರ್ ಗೆ ಕ್ಯಾಬಿನೆಟ್ ಸಮ್ಮತಿ: ಏನನ್ನು ನಿರೀಕ್ಷಿಸಬಹುದು?

ಕೊಲೆಗೆ ಕಾರಣವೇನು?

ಆರೋಪಿ ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಕೃತಿ ಕುಮಾರಿ ನೆಲೆಸಿದ್ದ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅಭಿಷೇಕ್, ಕೃತಿ ಸ್ನೇಹಿತೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಆನಂತರ ಅವರಿಬ್ಬರ ನಡುವೆ ಜಗಳವಾಗಿ ಅಭಿಷೇಕ್ ನನ್ನು ದೂರ ಮಾಡಿದ್ದಳು. ಆದರೆ, ಅಭಿಷೇಕ್ ತನ್ನ ಪ್ರೇಯಸಿಯನ್ನು ಉಪಾಯವಾಗಿ ಕರೆದೊಯ್ದು ತನ್ನ ರೂಮಿನಲ್ಲಿ ಕೂಡಿಹಾಕಿಕೊಂಡಿದ್ದ.ತನ್ನ ರೂಂ ಮೇಟ್ ಪಿಜಿಗೆ ವಾಪಸ್ ಆಗದೇ ಇದ್ದಿದ್ದನ್ನು ಗಮನಿಸಿದ್ದ ಕೃತಿ ಕುಮಾರಿ, ಆಕೆಯ ಬಗ್ಗೆ ವಿಚಾರಿಸಿದಾಗ ಆಕೆಯು ಗೃಹ ಬಂಧನದಲ್ಲಿರುವುದು ಗೊತ್ತಾಗಿತ್ತು.

ಇದನ್ನು ತಿಳಿದ ಕೃತಿ ಕುಮಾರಿ, ನೇರವಾಗಿ ಹೋಗಿ ತನ್ನ ಸ್ನೇಹಿತೆಯನ್ನು ಬಿಡಿಸಿಕೊಂಡು ಬಂದಿದ್ದಳು. ಇದು ಅಭಿಷೇಕ್ ನನ್ನು ಕೆರಳಿಸಿತ್ತು. ಅದೇ ಕಾರಣಕ್ಕಾಗಿ, ಜು. 23ರಂದು ಪಿಜಿಗೆ ನುಗ್ಗಿದ್ದ ಆತ ಕೊಲೆ ಮಾಡಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಗೆಳತಿಗೆ ಒಳ್ಳೆಯದು ಮಾಡಲು ಹೋಗಿದ್ದಕ್ಕೆ ತನ್ನ ಜೀವನನ್ನೇ ಕೃತಿ ಬಲಿಕೊಟ್ಟಿದ್ದಾಳೆ.

ಭೋಪಾಲ್ ನಲ್ಲಿ ಬಂಧನ

ಕ್ಷಿಪ್ರ ಮತ್ತು ಸಂಘಟಿತ ಪ್ರಯತ್ನದಲ್ಲಿ ಹಂತಕನನ್ನು ಬೇಟೆಯಾಡಲು ಬೆಂಗಳೂರು ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು.ಕೆಲವು ಮೂಲಗಳ ಪ್ರಕಾರ, ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು,

ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ಫೂಟೇಜ್‌ಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಆರೋಪಿಯ ಪ್ರೇಯಸಿಯ ಹೇಳಿಕೆಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು,ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *