Get flat 10% off on Wonderla Entry Tickets | Use coupon code "BTWONDER".
Four Lane Railway Track: ಬೆಂಗಳೂರು-ಮೈಸೂರು 4 ಹಳಿ ರೈಲು ಮಾರ್ಗಕ್ಕೆ ನೈಋತ್ಯ ರೈಲ್ವೆ ಯಿಂದ ಅಂತಿಮ ಸಮೀಕ್ಷೆ
Four Lane Railway Track: ಬೆಂಗಳೂರಿನಿಂದ ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ ಮುಂತಾದ ಸ್ಥಳಗಳಿಗೆ ರೈಲ್ವೆ ಮುಖಾಂತರ ಪ್ರಯಾಣ ಬೆಳೆಸುವಂತಹ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಸಿಹಿ ಸುದ್ದಿಯನ್ನು ನೀಡಿದೆ, ಹೌದು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಒಟ್ಟು ಒಂಬತ್ತು ಮಾರ್ಗಗಳಿಗೆ ನಾಲ್ಕು ಹಳಿಗಳ ರೈಲು ಮಾರ್ಗಗಳನ್ನು ನಿರ್ಮಿಸಲು ಅಂತಿಮ ಸಮೀಕ್ಷೆಯನ್ನು ಕೈಗೊಂಡಿದೆ.
Bengaluru, Dec 12: ಐಟಿ ಸಿಟಿ ಬೆಂಗಳೂರಿನಿಂದ ಹಲವೆಡೆಗೆ ರೈಲು ಸಾರಿಗೆ ಮೂಲಕ ಪ್ರಾಣಿಸುವ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕೆ ಪರ್ಯಾಯ ಉಪಾಯವಾಗಿ 6 ರಸ್ತೆಗಳ ಹೆದ್ದಾರಿಗಳನ್ನು ನಗರದಿಂದ ವಿವಿಧ ಜಿಲ್ಲೆಗಳಿಗೆ ನಿರ್ಮಿಸಿದ್ದರು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸರಕು ಸಾಗಾಣಿಕೆಗೆ ತೊಂದರೆಯಾಗಿದೆ,
ಅಲ್ಲದೇ ರೈಲಿನ ಮೂಲಕ 2 ಹಳಿಗಳ ಸಹಾಯದಿಂದ ಸರಕುಗಳ ಸಾಗಾಣಿಕೆ ನಿರ್ವಹಿಸಲು ತೊಂದರೆಯಾಗಿದೆ ಹಾಗಾಗಿ ಇದಕ್ಕೆ ಪರಿಹಾರವಾಗಿ ನೈರುತ್ಯ ರೈಲ್ವೆ ಇಲಾಖೆ ಇದೀಗ ಮಹತ್ತರ ಯೋಜನೆಗೆ ಮುಂದಾಗಿದೆ.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ, ಇಂದಿನ ದರ ಎಷ್ಟಿದೆ ನೋಡಿ!
ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಹಾಗೂ ಸರಕು ಸಾಗಾಣಿಕೆಯ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನೈರುತ್ಯ ರೈಲ್ವೆಯು ಹಲವಾರು ಯೋಜನೆಗಳನ್ನು ರೂಪಿಸಿವೆ ಹಾಗೂ ಇದೀಗ ಅದರ ಭಾಗವಾಗಿ ಬೆಂಗಳೂರಿನಿಂದ ಹಲವು ರೈಲು ಮಾರ್ಗಗಳಲ್ಲಿ ಎರಡು ಹಳಿ ರೈಲು ಮಾರ್ಗಗಳ ಜೊತೆಗೆ ಮತ್ತೆರಡು ಹಳಿಗಳನ್ನು ಜೋಡಿಸುವುದರ ಮೂಲಕ ನಾಲ್ಕು ಹಳಿಗಳ ವಿಸ್ತಾರವಾದ ರೈಲು ಮಾರ್ಗಗಳನ್ನು ನಿರ್ಮಿಸಲು ಈಗಾಗಲೇ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಸಮೀಕ್ಷೆಯು ಅಂತಿಮ ಘಟ್ಟವನ್ನು ತಲುಪಿದೆ.
ಬೆಂಗಳೂರಿನ ರಸ್ತೆ ಸಾರಿಗೆ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆ ಜಾರಿ!
ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಹಾಗೂ ರಸ್ತೆ ಸಾರಿಗೆ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ರೈಲ್ವೆ ಇಲಾಖೆಯು ಈ ಯೋಜನೆಯನ್ನು ಕೈಗೊಂಡಿದ್ದು, ನೈರುತ್ಯ ರೈಲ್ವೆಯ ವಿಭಾಗದಲ್ಲಿ ಬರುವಂತಹ ಬೆಂಗಳೂರಿನ ರೈಲು ನಿಲ್ದಾಣದಿಂದ ವಿವಿಧ ಮಾರ್ಗಗಳಿಗೆ 38 ಕೋಟಿ ವೆಚ್ಚದಲ್ಲಿ ಹನ್ನೆರಡು ರೈಲುಗಳ ಜೋಡಿಹಳಿ ಹಾಗೂ ನಾಲ್ಕುಹಳಿಗಳನ್ನು ಸಮೀಕ್ಷೆ ಮಾಡಲು ಯೋಜಿಸಲಾಗಿದ್ದು, 24 ತಿಂಗಳಲ್ಲಿ ಸಮೀಕ್ಷೆ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಮಳೆ ಸಾಧ್ಯತೆ, ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ನೋಡಿ!
ಯಾವ ಮಾರ್ಗಗಳಲ್ಲಿ ನಾಲ್ಕು ಹಳಿಗಳನ್ನು ನಿರ್ಮಿಸಲಾಗುವುದು?
ಬೆಂಗಳೂರು-ತುಮಕೂರು (70 ಕಿ.ಮೀ.), ಬೆಂಗಳೂರು-ಮೈಸೂರು (137 ಕಿ.ಮೀ.), ಘಟ್ಟ ಪ್ರದೇಶ ಸೇರಿದಂತೆ ಬಂಗಾರಪೇಟೆ-ಜೋಲಾರಪೇಟೈ (72 ಕಿ.ಮೀ.), ಹುಬ್ಬಳ್ಳಿ-ಹೊಸಪೇಟೆ (143 ಕಿ.ಮೀ.) ಹಾಗೂ ಚಾಮರಾಜನಗರ-ಮೈಸೂರು (60 ಕಿ.ಮೀ.) ಮಾರ್ಗವನ್ನು ಜೋಡಿಹಳಿಯಿಂದ ನಾಲ್ಕು ಹಳಿಗೆ ಹೆಚ್ಚಿಸಲು ಆರಂಭಿಕ ಹೆಜ್ಜೆ ಇಡಲಾಗಿದೆ.
ಒಂದು ಹಳಿ ಇರುವ ಮಾರ್ಗಗಳಿಗೆ ಜೋಡಿಹಳಿ!
ಹೊಸಪೇಟೆ-ವ್ಯಾಸ ಕಾಲೋನಿ (58 ಕಿ.ಮೀ), ಹಾಸನ-ಕುಣಿಗಲ್-ಚಿಕ್ಕಬಾಣಾವರ (166 ಕಿ.ಮೀ), ಗಿಣಿಗೇರಾ-ರಾಯಚೂರು (166 ಕಿ.ಮೀ), ವ್ಯಾಸ ಕಾಲೋನಿ-ಕೊಟ್ಟೂರು-ಅಮರಾವತಿ ಕಾಲೋನಿ (196 ಕಿ.ಮೀ), ಮಾಲ್ಗೂರು-ಮದಕಶಿರ-ಹಿರಿಯೂರು ಹೊಸ ಮಾರ್ಗದ ಡಬ್ಲಿಂಗ್ (110 ಕಿಮೀ) ಮತ್ತು ಗದಗ-ವಾಡಿ (257 ಕಿಮೀ) ಲಿಂಕ್ ಮಾಡಲು ಅಂತಿಮ ಸ್ಥಳ ಸಮೀಕ್ಷೆಗಾಗಿ ಟೆಂಡರ್ಗಳನ್ನು ಆಹ್ವಾನಿಸಿದೆ.
ನೈರುತ್ಯ ರೈಲ್ವೆಯು ಜೋಡಿ ಹಳಿ ನಿರ್ಮಾಣಕ್ಕೆ ಅವಶ್ಯಕತೆ ಇರುವ ನಿರ್ಮಾಣ ಹಾಗೂ ವಿದ್ಯುತ್ ಲೈನ್ ಗಳ ಗುರುತಿಸಿಕೊಳ್ಳುವುದು ಹಾಗೂ ತಿರುಗುಗಳನ್ನು ಗುರುತಿಸುವುದು ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಅಂತಿಮ ಸ್ಥಳ ಸಮೀಕ್ಷೆ ನಡೆಯಲಿದ್ದು ಜೊತೆಗೆ ಪ್ರಯಾಣಿಕರ ಅಗತ್ಯತೆ ಹಾಗೂ ಸರಕು ಸಾಗಣಿಕೆಗಳಂತಹ ಸಾಧಕ ಬಾದಕಗಳನ್ನು ಕುರಿತು ಇರುತ್ತೆ ಮಂಡಳಿಗೆ ನೈರುತ್ಯ ರೈಲ್ವೆ ಇಲಾಖೆಯು ವರದಿಯನ್ನು ಸಲ್ಲಿಸಲಿದೆ.
ಜೋಡಿ ಹಳಿ ನಿರ್ಮಾಣ ಅನಿವಾರ್ಯ ಏನು?
ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸರಕು ಸಾಗಣೆ ಮಾಡಲು ಜೋಡಿ ಮಾರ್ಗದ ಅಗತ್ಯವಿದೆ. ಇದನ್ನು ಉಪನಗರ ರೈಲುಗಳಿಗೂ ಮುಂದಿನ ದಿನಗಳಲ್ಲಿ ಬಳಸಬಹುದು. ಅಲ್ಲದೆ, ಒಂದು ಹಳಿಯಲ್ಲಿ ಸರಕು ರೈಲು, ಎರಡನೇ ಹಳಿಯಲ್ಲಿ ಪ್ಯಾಸೆಂಜರ್ ರೈಲು ಮತ್ತು 3-4ನೇ ಸಾಲಿನಲ್ಲಿ ಎಕ್ಸ್ಪ್ರೆಸ್, ಸೂಪರ್ಫಾಸ್ಟ್ ರೈಲುಗಳನ್ನು ಓಡಿಸಲು ಅವಕಾಶವಿದೆ.
Latest Trending
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today