Gold Rate Today in Bangalore: ಸೆ. 11ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ

Gold Rate Today in Bangalore: ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಂಡಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸೆಪ್ಟೆಂಬರ್ 11 ರಂದು 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನ ಸ್ವಲ್ಪ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆಯ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

Gold Rate Today in Bangalore

Bangalore, September 11; ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 10 ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನಕ್ಕೆ 59,840 ಮತ್ತು 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 54,850 ಆಗಿದೆ. ಇದರೊಂದಿಗೆ 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದ್ದು, 22ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 150 ರೂಪಾಯಿ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,840 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ

Read this,  ದೇಶದ ಮೊದಲ ಭೂಗತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬೆಂಗಳೂರಿನಲ್ಲಿ ಸ್ಥಾಪನೆ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!

ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕುಸಿದಿದೆ. ಕೆಲವು ನಗರಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 200 ರಿಂದ 400 ರೂ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 60,000 ರೂ.ಗಿಂತ ಕಡಿಮೆ ಇದೆ.

ದೆಹಲಿ:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ 10 ರೂ ಇಳಿಕೆ ಕಂಡಿದೆ ಮತ್ತು ಇಂದಿನ ಬೆಲೆ 10 ಗ್ರಾಂ ಚಿನ್ನಕ್ಕೆ 59990 ರೂ, ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಇಳಿಕೆ ಕಂಡಿದ್ದರಿಂದ 22ಕ್ಯಾರೆಟ್ ಚಿನ್ನದ ಬೆಲೆ ಇಂದು 54,990 ದಾಖಲಾಗಿದೆ.

Read this, ಬೆಂಗಳೂರಿನಲ್ಲಿ ಡೆಂಗ್ಯೂ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳು ಇಲ್ಲಿವೆ

ಮುಂಬೈ: 

ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ನಿನ್ನೆಯ ಬೆಲೆಯಿಂದ 10 ರೂ. ಇಳಿಕೆಯಾಗಿದೆ ಮತ್ತು ಹೀಗಾಗಿ ಇಂದಿನ ಬೆಲೆ 10 ಗ್ರಾಂಗೆ 59,830 ರೂ., ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಕಡಿಮೆಯಾಗಿ ಇಂದಿನ ಬೆಲೆ 10 ಗ್ರಾಂಗೆ 54,840 ಕ್ಕೆ ದಾಖಲಾಗಿದೆ. .

ಅಹಮದಾಬಾದ್‌: 

ದೇಶದ ಇತರ ನಗರಗಳ ಬಗ್ಗೆ ಮಾತನಾಡುವುದಾದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,890 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 59840 ರೂ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *