Dragon Fruit Benefits in Kannada: ಡ್ರ್ಯಾಗನ್ ಹಣ್ಣಿನ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು

Dragon Fruit Benefits in Kannada: ಡ್ರ್ಯಾಗನ್ ಹಣ್ಣು ಮೂಲತಃ ಚೀನಾದ್ದು, ಇದು ಉಷ್ಣವಲಯದ ಹಣ್ಣು ಮತ್ತು ಈ ಹಣ್ಣು ಮನುಷ್ಯನಿಗೆ ಬರುವ ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ಡ್ರ್ಯಾಗನ್ ಹಣ್ಣು ಪೌಷ್ಟಿಕಾಂಶದ ಪ್ರೋಟೀನ್ ಪದಾರ್ಥಗಳಲ್ಲಿ ಸಮೃದ್ಧವಾಗಿದೆ. ಈ ಹಣ್ಣು ನಮ್ಮ ದೇಹವನ್ನು ಆ್ಯಂಟಿ-ಆಕ್ಸಿಜನ್ ಹೊಂದಿದ್ದು ದೇಹವನ್ನು ರಕ್ಷಿಸುತ್ತದೆ. ಡ್ರ್ಯಾಗನ್ ಹಣ್ಣನ್ನು ಸೇವಿಸುವುದರಿಂದ ನಾವು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು, ಅವುಗಳೆಂದರೆ,

Dragon Fruit Benefits in Kannada

ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ:

ಪ್ರತಿದಿನ ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಇದರ ತಿರುಳನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಕಾಣುವುದು ಮತ್ತು ಬ್ಲ್ಯಾಕ್ ಹೆಡ್ಸ್/ವೈಟ್ ಹೆಡ್ಸ್ ಹೋಗಲಾಡಿಸುತ್ತದೆ.

ಸಕ್ಕರೆ ಕಾಯಿಲೆಗೆ ಲಾಭದಾಯಕವಾಗಿದೆ:

ಡ್ರ್ಯಾಗನ್ ಫ್ರೂಟ್ ಫೈಬರ್ ಅಂಶದಲ್ಲಿ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ:

ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಡ್ರ್ಯಾಗನ್ ಹಣ್ಣು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಕೂದಲು ಉದುರುವುದನ್ನು ತಡೆಗಟ್ಟಿ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ಕಲ್ಲಂಗಡಿ ಹಣ್ಣಿನಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು

ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಡ್ರ್ಯಾಗನ್ ಹಣ್ಣು ಬಹಳ ಉಪಯೋಗಕಾರಿಯಾಗಿದೆ:

ಸಂಶೋಧನೆಯೊಂದರ ಪ್ರಕಾರ, ಡ್ರ್ಯಾಗನ್ ಫ್ರೂಟ್ ಕ್ಯಾನ್ಸರ್ ಕೋಶಗಳನ್ನು ಶೇಕಡಾ 90 ರಷ್ಟು ಕೊಲ್ಲುವ ಶಕ್ತಿ ಹೊಂದಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ, ಈ ಹಣ್ಣು ಕ್ಯಾನ್ಸರ್ಗೆ ಒಳ್ಳೆಯದು.

ಕೊಲೆಸ್ಟ್ರಾಲ್‌ನ ಮಟ್ಟವನ್ನು ತಗ್ಗಿಸುತ್ತದೆ:

ಡ್ರ್ಯಾಗನ್ ಫ್ರೂಟ್ ಹೆಚ್ಚಿನ ಕೊಲೆಸ್ಟ್ರಾಲ್ ಇರುವವರಿಗೆ ತುಂಬಾ ಉಪಯುಕ್ತವಾಗಿದೆ ಏಕೆಂದರೆ ಇದರಲ್ಲಿ ಒಮೆಗಾ 3 ಮತ್ತು ಒಮೆಗಾ 6 ಸಮೃದ್ಧವಾಗಿದೆ, ಇದು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುವುದಲ್ಲದೆ ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:

ಡ್ರ್ಯಾಗನ್ ಹಣ್ಣಿನ ನಿಯಮಿತ ಸೇವನೆಯು ಹೃದಯ ಬಡಿತವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಡೆಂಗ್ಯೂ ಜ್ವರಕ್ಕೆ ಡ್ರ್ಯಾಗನ್ ಫ್ರೂಟ್ ಒಳ್ಳೆಯದು ಡೆಂಗ್ಯೂ ಜ್ವರ ಬಂದಾಗ ದೇಹದಲ್ಲಿ ಪ್ಲೇಟ್ ಲೆಟ್ ಗಳು ಕಡಿಮೆಯಾಗುತ್ತವೆ, ಅಂತಹ ಸಮಯದಲ್ಲಿ ರೋಗಿಗಳು ಡ್ರ್ಯಾಗನ್ ಜ್ಯೂಸ್ ಕುಡಿಯಬೇಕು.

ಡ್ರ್ಯಾಗನ್ ಫ್ರೂಟ್ ದೇಹದಲ್ಲಿ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ಮತ್ತು ಆರೋಗ್ಯಕರವಾಗಿರಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ:

ಡ್ರ್ಯಾಗನ್ ಹಣ್ಣು ಕಡಿಮೆ ಕ್ಯಾಲೋರಿ ಹಣ್ಣು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಇದು ಸುಮಾರು 60 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ವಿಟಮಿನ್ ಸಿ ಬಿ 1, ಬಿ 2, ಬಿ 3 ಮತ್ತು ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ.

ಇದನ್ನೂ ಓದಿ; ದಿನಕ್ಕೆ ಒಂದು ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು

ಮೂಳೆಗಳನ್ನು ಬಲಗೊಳಿಸುತ್ತದೆ:

ಡ್ರ್ಯಾಗನ್ ಹಣ್ಣಿನ ನಿಯಮಿತ ಸೇವನೆಯು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮೂಳೆ ಸವೆತವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿರುವ 18 ಪ್ರತಿಶತ ಮೆಗ್ನೀಸಿಯಮ್ ಅಂಶದಿಂದಾಗಿ ಮೂಳೆಗಳಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಡ್ರ್ಯಾಗನ್ ಹಣ್ಣು ಸಹಕಾರಿಯಾಗಿದೆ.

ಗರ್ಭಿಣಿಯರಿಗೆ ಬಹಳ ಉಪಯುಕ್ತಕಾರಿ:

ಡ್ರ್ಯಾಗನ್ ಹಣ್ಣಿನಲ್ಲಿ ವಿಟಮಿನ್ ಬಿ ಮತ್ತು ಕಬ್ಬಿನಾಂಶವು ಇರುವುದರಿಂದ ಗರ್ಭಿಣಿಯರಿಗೆ ಹೆಚ್ಚಾಗಿ ಶಕ್ತಿಯನ್ನು ನೀಡುತ್ತದೆ.ಮತ್ತು ಮಗುವಿನ ಆರೋಗ್ಯ ಬೆಳವಣಿಗೆಗೆ ಬಹಳ ಸಹಾಯಕವಾಗಿದೆ.

Reference

Medically Reviewed By

Amy Richter, MS, RD

Follow us on Instagram Bangalore Today

Bhagirathi H P
Bhagirathi H P
Articles: 46

Leave a Reply

Your email address will not be published. Required fields are marked *