Bangalore: ಬೆಂಗಳೂರು – ವಿಜಯಪುರ ನಡುವೆ ದೀಪಾವಳಿ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Bangalore – Vijayapura Special Train: ಹಬ್ಬ ಹರಿದಿನಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಬೆಂಗಳೂರು ಮತ್ತು ವಿಜಯಪುರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ದೀಪಾವಳಿ ಸಂದರ್ಭದಲ್ಲಿ ಹೆಚ್ಚುವರಿ ರೈಲು ಓಡಿಸಲು ಭಾರತೀಯ ನೈಋತ್ಯ ರೈಲ್ವೆ
ನಿರ್ಧರಿಸಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ, ಸಂಪೂರ್ಣ ವೇಳಾಪಟ್ಟಿ ಹಾಗೂ ಇತರೆ ವಿವರ ಇಲ್ಲಿದೆ.

Bangalore

Bangalore, Nov, 05: ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬೆಂಗಳೂರು ವಿಜಯಪುರ ಮಾರ್ಗದಲ್ಲಿ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ನೈಋತ್ಯ ರೈಲ್ವೆಯು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ವಿಜಯಪುರ ಮತ್ತು ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ಸರ್ಕಾರಿ ನೌಕರ ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ

ಅದರಂತೆ, ರೈಲು ಸಂಖ್ಯೆ 06231 ಎಸ್‌ಎಂವಿಟಿ ಬೆಂಗಳೂರು ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 10 ರಂದು ಸಂಜೆ 7 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10:55 ಕ್ಕೆ ವಿಜಯಪುರ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ವಿಜಯಪುರ-ಎಸ್‌ಎಂವಿಟಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 14 ರಂದು ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.30 ಕ್ಕೆ ಎಸ್‌ಎಂವಿಟಿಗೆ ಆಗಮಿಸುತ್ತದೆ.

ರೈಲು ಸಂಖ್ಯೆ 06585 SMVT-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 10 ರಂದು ರಾತ್ರಿ 8 ಗಂಟೆಗೆ SMVT ಯಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ನಂ. 06586 ಬೆಳಗಾವಿ-ಎಸ್‌ಎಂವಿಟಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 14 ರಂದು ಸಂಜೆ 6.50 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಎಸ್‌ಎಂವಿಟಿ ತಲುಪಲಿದೆ.

ವೇಳಾಪಟ್ಟಿ!

ವಿಜಯಪುರದಿಂದ ಹೊರಡು ರೈಲು ಆಲಮಟ್ಟಿ (6.03/ 06.05), ಬಾಗಲಕೋಟೆ (06.53/ 06.55), ಬಾದಾಮಿ (7.18/ 7.20), ಗದಗ (9.13/ 9.15), ಕೊಪ್ಪಳ (10.13/ 10.15), ಮುನಿರಾಬಾದ್ (10.33/ 10.35), ಹೊಸಪೇಟೆ (10.55/ 11), ತೋರಣಗಲ್ಲು (11.33/ 11.35), ಬಳ್ಳಾರಿ (12/ 12.02), ರಾಯದುರ್ಗ (3/ 03.02), ಚಿತ್ರದುರ್ಗ (4.30/ 4.32), ಚಿಕ್ಕಜಾಜೂರು (5.10/ 5.12), ಬೀರೂರು (6.08/ 6.10), ಅರಸೀಕೆರೆ (6.50/ 6.52) ಮತ್ತು ತುಮಕೂರು (8.30/ 8.32) ಆಗಮನ/ ನಿರ್ಗಮನವಾಗಲಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *