17.5 ಕೋಟಿ ಚುಚ್ಚುಮದ್ದು ಗಾಗಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ, ಯಾವುದು ಈ ಖಾಯಿಲೆ!

Siddaramaiah: ರಾಜ್ಯದ ಅತ್ಯುತ್ಥಮ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ 15 ವರ್ಷದ ಬಾಲಕನ ಸಂಕಷ್ಟಕ್ಕೆ ಮಿಡಿದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸ್ಪಂದಿಸಿದ್ದಾರೆ.

siddaramaiah

Image Credit: Telegraph India

ಮಲ್ಲಿಕಾರ್ಜುನ ಚನಪ್ಪಗೌಡರ್ ಮತ್ತು ಮಾಧುರಿ ಎಂಬ ದಂಪತಿಗೆ ಜನಿಸಿದ ಮಗುವು ಅಪರೂಪ ಖಾಯಿಲೆಯಾದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಟೈಪ್ 2, ಅಪರೂಪದ ಆನುವಂಶಿಕ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹೆಚ್ಚು ಹಣ ಅವಶ್ಯಕವಿದ್ದ ಕಾರಣ ಸಿಎಂ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಚಿಕಿತ್ಸೆಗೆ ಬೇಕಿರುವ ಚುಚ್ಚುಮದ್ದಿನ ಬೆಲೆ 17.5 ಕೋಟಿ ಆಗಿದ್ದು ಅದಕ್ಕೆ ತೆರಿಗೆ ವಿನಯತಿ ನೀಡುವಂತೆ ಕೇಳಿಕೋದಿದ್ದರೆ.

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಟೈಪ್ 2 ಖಾಯಿಲೆ ಹೇಗೆ ಮಾರಣಾಂತಿಕ ?

SMA ಎನ್ನುವುದು ಮೆದುಳಿನಿಂದ ಸ್ನಾಯುಗಳಿಗೆ ವಿದ್ಯುತ್ ಸಂಕೇತಗಳನ್ನು ಸಾಗಿಸುವ ನರ ಕೋಶಗಳ ನಷ್ಟದಿಂದ ಉಂಟಾಗುವ ಕಾಯಿಲೆಯಾಗಿದ್ದು ಮಕ್ಕಳಲ್ಲಿ ಕಂಡುಬರುವ ಅಪರೂಪದ ಆನುವಂಶಿಕ ಖಾಯಿಲೆಯಾಗಿದೆ ಮತ್ತು ಈ ಖಾಯಿಲೆಯ ಚಿಕಿತ್ಸೆಗಾಗಿ ZOLGENSMA ಎಂಬ ಔಷಧಿಯನ್ನು ಬಳಸುತ್ತಾರೆ.

ಬದುಕುಳಿಯುವ ಮೋಟಾರು ನರಕೋಶ 1 (SMN1) ಜೀನ್‌ನಲ್ಲಿನ ದ್ವಿ-ಅಲೆಲಿಕ್ ರೂಪಾಂತರಗಳೊಂದಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA) ಯೊಂದಿಗೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ರೋಗಿಗಳ ಚಿಕಿತ್ಸೆಗಾಗಿ ZOLGENSMA ಎಂಬುದು ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ ಮತ್ತು ಇದರ ಬೆಲೆ 17.5 ಕೋಟಿ ಆಗಿರುತ್ತದೆ.

ಇದನ್ನೂ ಓದಿ; ರಾಜ್ಯ ರಾಜಧಾನಿಯಲ್ಲಿ ಕನ್ನಡ ಬಳಕೆಗೆ ಅಸಡ್ಡೆ: ರಾರಾಜಿಸುತ್ತಿವೆ English ನಾಮಫಲಕಗಳು

ಆದ್ದರಿಂದ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಔಷಧಿಗಳ ಅತಿಯಾದ ವೆಚ್ಚವು ಈ ನಿರ್ಣಾಯಕ ಚಿಕಿತ್ಸೆಯನ್ನು ಪ್ರವೇಶಿಸಲು ಕುಟುಂಬಕ್ಕೆ ಅಸಾಧಾರಣ ಸವಾಲಾಗಿದೆ. ಔಷಧದ ಬೆಲೆಯೇ ಅಗಾಧವಾಗಿದ್ದರೂ, ಸೇರಿಸಿದ ಆಮದು ತೆರಿಗೆಗಳು ಆರ್ಥಿಕ ಹೊರೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ.

ಬಾಲಕ ಮೌರ್ಯ ಅವರನ್ನು ಬೆಂಬಲಿಸುವ ತೀವ್ರ ಅಗತ್ಯವನ್ನು ಅರ್ಥಮಾಡಿಕೊಂಡು, ಔಷಧದ ಮೇಲಿನ ಆಮದು ಸುಂಕವನ್ನು ಮನ್ನಾ ಮಾಡುವಲ್ಲಿ ಮತ್ತು PM ಕೇರ್ಸ್ ನಿಧಿಯ ಅಡಿಯಲ್ಲಿ ಹಣಕಾಸಿನ ನೆರವು ನೀಡುವಲ್ಲಿ ನಿಮ್ಮ ಪರೋಪಕಾರಿ ಮಧ್ಯಸ್ಥಿಕೆಯನ್ನು ನಾನು ಮನಃಪೂರ್ವಕವಾಗಿ ವಿನಂತಿಸುತ್ತೇನೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರದಲ್ಲಿ ತಿಳಿಸಲಾಗಿದೆ.

Latest Trending

Follow us on Instagram Bangalore Today

Dhananjay Kumar T P
Dhananjay Kumar T P
Articles: 3

Leave a Reply

Your email address will not be published. Required fields are marked *