Get flat 10% off on Wonderla Entry Tickets | Use coupon code "BTWONDER".
BMTC Bus Hits Two-wheeler: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು, ಗಂಡ ಮತ್ತು ಮಗಳು ಪಾರು!
BMTC Bus Hits Two-wheeler: ನಿನ್ನೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಸಂಜೆ 6:30 ವೇಳೆಗೆ ಭೀಕರ ಅಪಘಾತ ಸಂಭವಿಸಿದೆ, ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ, ಇದರ ಪರಿಣಾಮ ದಂಪತಿ ಮತ್ತು ಮಗು ಕೆಳಗೆ ಬಿದ್ದಿದ್ದು ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Bengaluru: ಬೆಂಗಳೂರಿನ ಸಿಂಗರ್ಸ್ದ್ರದಲ್ಲಿ ವಾಸವಾಗಿದ್ದ ಸೀಮಾ (21) ಕಳೆದ ಎರಡುವರೆ ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗಳು, ನಿನ್ನೆ ಸಂಜೆ ಪ್ರೊ ಕಬಡ್ಡಿ ಪಂದ್ಯ ವೀಕ್ಷಿಸಲು ತಮ್ಮ ಮಗುವಿನ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಬಿಎಂಟಿಸಿ ಬಸ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮಡಿವಾಳ ಫ್ಲವರ್ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ,
ಇದರ ಪರಿಣಾಮವಾಗಿ ದಂಪತಿಗಳು ಮತ್ತು ಪುಟ್ಟ ಮಗು ನೆಲಕ್ಕುರಲಿದ್ದಾರೆ ಹಾಗೂ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದಿರಾ ಪರಿಣಾಮ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಅದೃಷ್ಟವಶಾತ್ ಗಂಡ ಹಾಗೂ ಮಗು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು- ಮೈಸೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಈ ಓಡಾಡಲಿದೆ ಪ್ರತಿ 10 ನಿಮಿಷಕ್ಕೊಂದು ರೈಲು!
ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಅಪಘಾತ ಸಂಭವಿಸಿದ ತಕ್ಷಣ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೂಲತಹ ವಿಜಯನಗರ ಜಿಲ್ಲೆಯ ಶ್ರೀಕಂಠಪುರ ತಾಂಡಾದ ನಿವಾಸಿಗಳಾದ ದಂಪತಿಗಳು ಉದ್ಯೋಗಹರಸಿ ಬೆಂಗಳೂರಿನಲ್ಲಿ ನೆಲೆಸಿದ್ದರು ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಗುರುಮೂರ್ತಿಯವರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಸಿಂಗಸಂದ್ರದಲ್ಲಿ ವಾಸವಾಗಿದ್ದ ಸೀಮಾ ಮತ್ತು ಗುರುಮೂರ್ತಿ ದಂಪತಿಗಳು ಎರಡುವರೆ ವರ್ಷದ ಹಿಂದೆ ಅಷ್ಟೇ ವಿವಾಹ ವಾಗಿದ್ದರು ಇವರಿಗೆ ಒಂದು ಗಾನವಿ ಎಂಬ ಪುಟ್ಟ ಮಗು ಸಹ ಇದೆ ಬೈಕ್ನಲ್ಲಿ ನಿನ್ನ ಸಂಜೆಯ ಪ್ರೋ ಕಬ್ಬಡಿ ಪಂದ್ಯವನ್ನು ವೀಕ್ಷಿಸಲು ಹೋಗುತ್ತಿದ್ದ ವೇಳೆ ಈ ಒಂದು ಅಪಘಾತ ಸಂಭವಿಸಿದ್ದು ಬಿಎಂಟಿಸಿ ಬಸ್ ನ ಚಕ್ರದಡಿ ಸಿಲುಕಿದ ಸೀಮಾ ಹೆಲ್ಮೆಟ್ ಧರಿಸಿದ್ದರೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಡಿ. 14 ರಂದು ಚಿನ್ನದ ದರದಲ್ಲಿ ಮತ್ತೆ ಸತತ 4ನೇ ದಿನವೂ ಇಳಿಕೆ! ಎಷ್ಟಿದೆ ನೋಡಿ
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮೃತ ಮಹಿಳೆಯ ಪತಿ ಗುರುಮೂರ್ತಿ “ನಿನ್ನೆ ಸಂಜೆ ಪ್ರೊ ಕಬ್ಬಡಿ ನೋಡಲೆಂದು ಪತ್ನಿ ಹಾಗೂ ಮಗುವಿನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಸ್ ತಿರುಗಿಸಿ ಡಿಕ್ಕಿ ಹೊಡೆದಿದ್ದಾರೆ ಪತ್ನಿ ಸಾವು ಸಂಭವಿಸುತ್ತಿದ್ದಂತೆ ಚಾಲಕ ಕಂಡಕ್ಟರ್ ಇಬ್ಬರೂ ಪರಾಗಿ ಪರಾರಿಯಾಗಿದ್ದಾರೆ” ಎಂದು ಕಣ್ಣೀರು ಹಾಕುತ್ತಾ ವಿವರಿಸಿದರು, ಘಟನೆಯ ಬಳಿಕ ಯಾವ ಬಿಎಂಟಿಸಿ ಅಧಿಕಾರಿಯೊಬ್ಬರು ಬಂದಿಲ್ಲ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಮೃತ ಸೀಮಾ ಮರಣೋತ್ತರ ಪರೀಕ್ಷೆಯನ್ನು ಸೆಂಟ್ ಜಾನ್ಸನ್ ಆಸ್ಪತ್ರೆಯಲ್ಲಿ ನಡೆಸಲಾಯಿತು
Latest Trending
- ಯುವ ನಿಧಿ ಯೋಜನೆಗೆ ಅರ್ಜಿ ಆಹ್ವಾನ & ಭತ್ಯೆ ಹಣ ಖಾತೆಗೆ ವರ್ಗಾವಣೆ ಯಾವಾಗ ? ಇಲ್ಲಿದೆ ಸಂಪೂರ್ಣ ವಿವರ!
- ಬೆಂಗಳೂರು-ಮೈಸೂರು 4 ಹಳಿ ರೈಲು ಮಾರ್ಗಕ್ಕೆ ನೈಋತ್ಯ ರೈಲ್ವೆ ಯಿಂದ ಅಂತಿಮ ಸಮೀಕ್ಷೆ
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today