Bengaluru: ಬೆಂಗಳೂರಿಗರೇ ತರಕಾರಿ ಖರೀದಿಸುವ ಮುನ್ನ ಎಚ್ಚರ! ಸಂಶೋಧನೆಯಲ್ಲಿ ವಿಷಕಾರಿ ಅಂಶ ಪತ್ತೆ

Bengaluru: ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ (EMPRI) ನಡೆಸಿದ 10 ತರಕಾರಿಗಳ 400 ಮಾದರಿಗಳ ಪರೀಕ್ಷೆಯಲ್ಲಿ ತರಕಾರಿಗಳು ಅನಾರೋಗ್ಯಕರ ಅಪಾಯಕಾರಿ ಅಂಶಗಳನ್ನು ಒಳಗೊಂಡಿವೆ ಎಂದು ವರದಿ ಮಾಡಿದೆ.

ತರಕಾರಿಗಳನ್ನು ತಿನ್ನುವುದರಿಂದ ನೀವು ಆರೋಗ್ಯವಾಗಿರಬಹುದು ಎಂದು ನಿಮಗೆ ತಿಳಿದಿದೆ, ಆದರೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (EMPRI) ವರದಿಯು ಬೆಂಗಳೂರಿನಲ್ಲಿ ದೊರೆಯುವ ತರಕಾರಿ ಸೇವನೆಯು ಅವರ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ ಎಂಬ ಸಂಗತಿಯು ಬೆಂಗಳೂರಿಗರನ್ನು ಚಿಂತೆಗೀಡು ಮಾಡಿದೆ.

Bengaluru

Bangalore, October 25: ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಯಲು ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿಯೂ ನಿಗದಿತ ಮಿತಿಗಿಂತ ಹೆಚ್ಚು ರಾಸಾಯನಿಕ ಅಂಶಗಳ ಬಳಕೆ ಹಾಗೂ ತ್ಯಾಜ್ಯ ನೀರನ್ನು ಕೃಷಿಗೆ ಮೂಲವಾಗಿ ಬಳಸುತ್ತಿರುವುದು ತರಕಾರಿಗಳಲ್ಲಿ ಅಪಾಯಕಾರಿ ಅಂಶ ಹೆಚ್ಚಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ; ಅ. 25 ಇಂದಿನ ಚಿನ್ನದ ಬೆಲೆಯಲ್ಲಿ ಸ್ಥಿರತೆ! ಎಷ್ಟಿದೆ ಈಗಲೇ ನೋಡಿ

ಈ ತರಕಾರಿಗಳಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮಾಲಿನ್ಯಕಾರಕಗಳು ಪತ್ತೆಯಾಗಿವೆ. ಈ ತರಕಾರಿಗಳನ್ನು ಬೆಂಗಳೂರು, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದ ಹೊರವಲಯದಲ್ಲಿರುವ ರೈತರಿಂದ ಪಡೆಯಲಾಗುತ್ತದೆ, ಇದು ರಾಜ್ಯದ ಜನಸಂಖ್ಯೆಯ ಐದನೇ ಒಂದು ಭಾಗದ ಜನ ಸೇವಿಸುವ ತರಕಾರಿಯ ಪ್ರಮಾಣವಾಗಿದೆ.

ಹಾಪ್‌ಕಾಮ್ಸ್‌ನಿಂದ ಪ್ರತಿದಿನ 70 ಟನ್ ತರಕಾರಿ!

ಬೆಂಗಳೂರಿನ ನಿವಾಸಿಗಳಿಗೆ ಹಾಪ್‌ಕಾಮ್ಸ್‌ನಿಂದ ಪ್ರತಿದಿನ 70 ಟನ್ ತರಕಾರಿಗಳನ್ನು ತಲುಪಿಸಲಾಗುತ್ತದೆ, ಇದನ್ನು ಹೊರತುಪಡಿಸಿ, ಜನರು ತಳ್ಳುಗಾಡಿ ಸೂಪರ್‌ಮಾರ್ಕೆಟ್‌ಗಳು, ಖಾಸಗಿ ಅಂಗಡಿಗಳು ಮತ್ತು ಇತರ ಮೂಲಗಳಿಂದ ತರಕಾರಿಗಳನ್ನು ಖರೀದಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಬದನೆ, ಟೊಮೆಟೊ, ಕ್ಯಾಪ್ಸಿಕಂ, ಬೀನ್ಸ್, ಕ್ಯಾರೆಟ್, ಹಸಿರು ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಪಾಲಕ್ ಮತ್ತು ಕೊತ್ತಂಬರಿ ಸೇರಿದಂತೆ 10 ತರಕಾರಿಗಳ ಮಾದರಿಗಳನ್ನು ಪರೀಕ್ಷಿಸಲಾಯಿತು.

ಈ ತರಕಾರಿಗಳಲ್ಲಿ ಹೆವಿ ಮೆಟಲ್ ಅಂಶಗಳು ಪತ್ತೆಯಾಗಿವೆ. ಒಂದು ತರಕಾರಿ ಗರಿಷ್ಟ 425.5 mg/kg ಲೋಹದ ಅಂಶವನ್ನು ಹೊಂದಿರಬೇಕು. ಆದರೆ ಅತ್ಯಂತ ಜನಪ್ರಿಯ ಮಾರುಕಟ್ಟೆಯ ಬೀನ್ಸ್ 810.20 mg/kg, ಕೊತ್ತಂಬರಿ 945.70 mg/kg ಮತ್ತು ಪಾಲಕ 554.58 mg/kg ಸಾಂದ್ರತೆಯನ್ನು ಹೊಂದಿದೆ. ಮತ್ತು ಹಾಪ್‌ಕಾಮ್ಸ್‌ನಲ್ಲಿ ಖರೀದಿಸಿದ ಈರುಳ್ಳಿಯಲ್ಲಿ 592.18 ಮಿಗ್ರಾಂ/ಕೆಜಿ ಲೋಹವಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸೂಪರ್‌ ಮಾರ್ಕೆಟ್‌ಗಳು ಮತ್ತು ಸಣ್ಣ ಸ್ಟೋರ್‌ಗಳಲ್ಲಿ ಖರೀದಿಸುವ ತರಕಾರಿಗಳಲ್ಲಿ ಲೋಹದ ಅಂಶ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *