Get flat 10% off on Wonderla Entry Tickets | Use coupon code "BTWONDER".
Biriyani: ಚಿಕನ್ ಪೀಸ್ ಇಲ್ಲದೆ ಬಿರಿಯಾನಿ ನೀಡಿದ ಹೋಟೆಲ್ ವಿರುದ್ಧ ಪ್ರಕರಣ ದಾಖಲಿಸಿ ₹1 ಸಾವಿರ ಪರಿಹಾರ ಪಡೆದ ವ್ಯಕ್ತಿ
Biriyani: ಚಿಕನ್ ಪೀಸ್ ಇಲ್ಲದೇ ಬಿರಿಯಾನಿ ನೀಡಿದ್ದಕ್ಕೆ ಹೋಟೆಲ್ ವೊಂದರ ವಿರುದ್ಧ ಕೇಸ್ ದಾಖಲಿಸಿ 1,000 ರೂಪಾಯಿ ಕೋರ್ಟ್ನಲ್ಲಿ ಪರಿಹಾರವನ್ನು ಪಡೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಚಿಕನ್ ಪೀಸ್ ಹಾಕದೆ ಬಿರಿಯಾನಿ ತಿಂದರೆ ಸಮಾಧಾನವಾಗುವುದಿಲ್ಲ ಎಂದು ಬೆಂಗಳೂರಿನ ನಿವಾಸಿ ಕೃಷ್ಣ ಎಂಬುವರ ಮನೆಯಲ್ಲಿ ಸಿಲಿಂಡರ್ ಖಾಲಿಯಾಗುತ್ತಿದ್ದು, ಬೆಂಗಳೂರಿನ ಐಟಿ ಲೇಔಟ್ ನಲ್ಲಿರುವ ಹೋಟೆಲ್ ಪ್ರಶಾಂತ್ ಗೆ ತೆರಳಿ 150 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಮನೆಯಲ್ಲಿ ತಿನ್ನಲು ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡು ಹೋದರು.
ನಂತರ ಈ ಬಿರಿಯಾನಿ ಸವಿಯಲು ಪಾರ್ಸೆಲ್ ತೆರೆದು ನೋಡಿದಾಗ ಚಿಕನ್ ಮಾಂಸದ ತುಂಡು ಕಾಣೆಯಾಗಿತ್ತು. ಹೋಟೆಲ್ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆಗ ಹೋಟೆಲ್ ಮಾಲೀಕ ಕೃಷ್ಣನಿಗೆ ಐದು ನಿಮಿಷದಲ್ಲಿ ಇನ್ನೊಂದು ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ. ಎರಡು ಗಂಟೆ ಕಳೆದರೂ ಹೋಟೆಲ್ನಿಂದ ಯಾವುದೇ ಪಾರ್ಸೆಲ್ ಬರದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದ ಕೃಷ್ಣ ರವರು ದೂರು ನೀಡಿದ್ದರು.
ಇದನ್ನೂ ಓದಿ; ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!
ಇದಕ್ಕೆ ಸಾಕ್ಷಿ ಎಂಬಂತೆ ಬಿರಿಯಾನಿಯ ಫೋಟೋ ಕೂಡ ತೆಗೆದು ನ್ಯಾಯಾಲಯಕ್ಕೆ ನೀಡಿದ್ದು, ಹೊಟೇಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ಸಮಜಾಯಿಷಿ ನೀಡಿದ್ದು, ನಂತರ ಹೋಟೆಲ್ ಗೆ ಒಂದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದ್ದು, ಬಿರಿಯಾನಿ ದುಡ್ದು 150 ರೂಪಾಯಿ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ತೀರ್ಪನ್ನು ನೀಡಿದೆ.
Latest Trending
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today Bangalore Today