Get flat 10% off on Wonderla Entry Tickets | Use coupon code "BTWONDER".
KSRTCಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 1200 ವಿಶೇಷ ಬಸ್ಗಳ ವ್ಯವಸ್ಥೆ, ಮಾಹಿತಿ ಇಲ್ಲಿದೆ
Bangalore, September 11; ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಿ ಹಬ್ಬ ಆಚರಿಸಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸರ್ಕಾರ ವಿಶೇಷವಾಗಿ 1200 ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಿದೆ. ಸಪ್ಟೆಂಬರ್ 15 ರಿಂದ 18ವರೆಗೂ ಈ ವಿಶೇಷ ಬಸ್ಗಳು ಸಂಚಾರ ನಡೆಸಲಿವೆ.
ಈ ಹೆಚ್ಚುವರಿ ಬಸ್ ಸೇವೆಯು, ಸೆಪ್ಟೆಂಬರ್ 15, 16 ಮತ್ತು 17 ನೇ ವಾರಾಂತ್ಯ ಮತ್ತು ಸೆಪ್ಟೆಂಬರ್ 18 ರಂದು ಗೌರಿ ಗಣೇಶ ಹಬ್ಬ, ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಸಂದರ್ಭದಲ್ಲಿ KSRTC ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 200 ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಈ ಊರಿಗಳಿಗೆ ವಿಶೇಷ ಬಸ್!
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಕೊರಗಿ, ಬಿಲ್ಲಾರಗಿ, ಬೆಳ್ಳಾರೆ, ಬೆಳ್ಳಾರೆ , ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ ಸಪ್ಟೆಂಬರ್ 15 ರಿಂದ 18ವರೆಗೂ ಕಾರ್ಯಾಚರಣೆ ಮಾಡಲಿದೆ.
Read now, ಬೆಂಗಳೂರು ಬಂಧ್ ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳೇನು?
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ವಿಶೇಷ ಬಸ್!
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮೂಲಕ ಕಾರ್ಯಾಚರಣೆ. ಸಾರ್ವಜನಿಕ ಪ್ರಯಾಣದ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಾಗಿ ಮುಂಗಡ ಸೀಟು ಕಾಯ್ದಿರಿಸುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮೊದಲು ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್ಗಳಲ್ಲಿ ನಮೂದಿಸಲಾದ ಬಸ್ ನಿಲ್ದಾಣ/ಪಿಕಪ್ ಪಾಯಿಂಟ್ ಹೆಸರನ್ನು ಗಮನಿಸಲು ವಿನಂತಿಸಲಾಗಿದೆ.
ಮುಂಗಡ ಟಿಕೆಟ್ ಬುಕಿಂಗ್ ಮೇಲೆ 10% ರಿಯಾಯಿತಿ!
ಬೆಂಗಳೂರಿನಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ 5% ರಿಯಾಯಿತಿ ನೀಡಲಾಗುವುದು. ಹೊರಹೋಗುವ ಮತ್ತು ಹಿಂದಿರುಗುವ ಎರಡೂ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ ಒಳಬರುವ ದರದಲ್ಲಿ 10 ಪ್ರತಿಶತ ರಿಯಾಯಿತಿ ನೀಡಲಾಗುವುದು ಎಂದು KSRTC ಘೋಷಿಸಿದೆ.
Read This, ಸೆ. 11ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ
ಅಂತರರಾಜ್ಯ ವಿಶೇಷ ಬಸ್ ವ್ಯವಸ್ಥೆ!
ಬೆಂಗಳೂರಿನಿಂದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿ ಸೇರಿದಂತೆ ರಾಜ್ಯದ ಇತರ ಪ್ರಮುಖ ನಗರಗಳಿಗೆ ವಿಶೇಷ ಬಸ್ ಸೇವೆಯನ್ನು ಯೋಜಿಸಲಾಗಿದೆ.
Latest Trending
- 500 ಕೋಟಿ ವೆಚ್ಚದಲ್ಲಿ ಕರ್ನಾಟಕಕ್ಕೆ 1,020 ಹೊಸ ಬಸ್.
- ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು
- ದೇಶದ ಮೊದಲ ಭೂಗತ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೆಂಗಳೂರಿನಲ್ಲಿ ಸ್ಥಾಪನೆ.
Follow us on Instagram Bangalore Today