Get flat 10% off on Wonderla Entry Tickets | Use coupon code "BTWONDER".
Vande Bharat Train: ಬೆಂಗಳೂರು-ಬೆಳಗಾವಿ ನಡುವೆ ನ.21 ರಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಾಯೋಗಿಕ ಚಾಲನೆ
Vande Bharat Train: ಪ್ರಸ್ತುತ ಬೆಂಗಳೂರು-ಧಾರವಾಡ ನಡುವೆ ಕಾರ್ಯನಿರ್ವಹಿಸುತ್ತಿರುವ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ವರೆಗೆ ವಿಸ್ತರಿಸಲಾಗಿದೆ. ಈ ಮಾರ್ಗದ ನಡುವೆ ಹಲವು ಮಹತ್ವದ ಸೌಲಭ್ಯಗಳು ಹಾಗೂ ಕಾಮಗಾರಿಗಳು ಪೂರ್ಣಗೊಂಡಿದ್ದು, ಅಗತ್ಯ ಕಾಮಗಾರಿಗಳನ್ನು ರೈಲ್ವೆ ಇಲಾಖೆ ಅತ್ಯಂತ ವೇಗವಾಗಿ ನಡೆಸುತ್ತಿದ್ದು, ನವೆಂಬರ್ 21 ರಂದು ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಮತ್ತು ನವೆಂಬರ್ ಅಂತ್ಯದ ವೇಳೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.
Bangalore, November, 18: ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದ ರೈಲು ಡಬ್ಬಿಂಗ್ ಮತ್ತು ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದೀಗ ನವೆಂಬರ್ 21 ರಂದು ಈ ಮಾರ್ಗದ ನಡುವೆ ಪ್ರಾಯೋಗಿಕ ಸಂಚಾರ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಖರೀದಿ ಸಮಸ್ಯೆಗೆ ಹೇಳಿ ಗುಡ್ ಬೈ
ನವೆಂಬರ್ 21ಕ್ಕೆ ವಂದೇ ಭಾರತ್ ಪ್ರಾಯೋಗಿಕ ಚಾಲನೆ!
ನವಂಬರ್ ಅಂತ್ಯದ ವೇಳೆಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಿರುವಂತಹ ರೈಲ್ವೆ ಇಲಾಖೆ ನವೆಂಬರ್ 21ರಂದು ಪ್ರಾಯೋಗಿಕ ಚಾಲನೆಯನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದೆ.
ಬೆಂಗಳೂರಿನಿಂದ ಬೆಳಿಗ್ಗೆ 5:45 ಕ್ಕೆ ಹೊರಡುವ ವಂದೇ ಭಾರತ್ ಎಕ್ಸ್ಪ್ರೆಸ್ ಅಂದಾಜು ಮಧ್ಯಾಹ್ನ 1:30 ಕ್ಕೆ ಬೆಳಗಾವಿ ತಲುಪುವ ನಿರೀಕ್ಷೆಯಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಬೆಳಗಾವಿಯಿಂದ ಮಧ್ಯಾಹ್ನ 2:00 ಕ್ಕೆ ಹೊರಟು ರಾತ್ರಿ 10:10 ಕ್ಕೆ ಬೆಂಗಳೂರು ತಲುಪುತ್ತದೆ. 7 ಗಂಟೆ 45 ನಿಮಿಷಗಳ ಪ್ರಯಾಣದ ಸಮಯದೊಂದಿಗೆ, ಈ ಗಮನಾರ್ಹ ರೈಲು ಕರ್ನಾಟಕದ ಈ ಎರಡು ಪ್ರಮುಖ ನಗರಗಳ ನಡುವಿನ ಅತ್ಯಂತ ವೇಗದ ಸಾರಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಮಾರ್ಗಕ್ಕೆ ಡಬಲ್ ಟ್ರ್ಯಾಕ್ ಮತ್ತು ವಿದ್ಯುದ್ದೀಕರಣ!
ಬೆಂಗಳೂರಿನಿಂದ ಧಾರವಾಡ ಮಾರ್ಗವಾಗಿ ಬೆಳಗಾವಿಗೆ ವಂದೇ ಭಾರತ್ ರೈಲು ಓಡಿಸಲು ರೈಲು ಜೋಡಿ ಮಾರ್ಗ, ವಿದ್ಯುದ್ದೀಕರಣ ಈ ಆಧುನಿಕ ಮೂಲಸೌಕರ್ಯವು ವಂದೇ ಭಾರತ್ ಎಕ್ಸ್ಪ್ರೆಸ್ನ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೂಲಸೌಕರ್ಯ ಸೇರಿದಂತೆ ಪ್ರಮುಖ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಹಾಗಾಗಿ ಈ ಎಲ್ಲಾ ಕಾಮಗಾರಿಗಳ ಗುಣಮಟ್ಟ ಮತ್ತು ರೈಲು ಚಾಲನೆಯ ಸುರಕ್ಷತೆಯ ಮಟ್ಟವನ್ನು ಈ ಪ್ರಾಯೋಗಿಕ ಚಾಲನೆಯಲ್ಲಿ ಪರೀಕ್ಷಿಸಲಾಗುತ್ತದೆ.
Latest Trending
- ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ನವೆಂಬರ್ ಅಂತ್ಯದ ವೇಳೆಗೆ ಬೆಳಗಾವಿಗೆ ವಿಸ್ತರಣೆ
- 500 ಕೋಟಿ ವೆಚ್ಚದಲ್ಲಿ ಕರ್ನಾಟಕಕ್ಕೆ 1,020 ಹೊಸ ಬಸ್.
- ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ
Follow us on Instagram Bangalore Today