Get flat 10% off on Wonderla Entry Tickets | Use coupon code "BTWONDER".
Rain Forecast in Bangalore: ರಾಜ್ಯ ರಾಜಧಾನಿಯಲ್ಲಿ ಕೇವಲ 1 ಗಂಟೆ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತ
Rain Forecast in Bangalore: ಬೆಂಗಳೂರಿನಾದ್ಯಂತ ಧಾರಾಕಾರ ಮಳೆಯಿಂದಾಗಿ ರಸ್ತೆಗಳ ಮೇಲೆ ಭಾರೀ ನೀರು ಹರಿದು ನಗರದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ. ನಾಗವಾರ ಜಂಕ್ಷನ್ನಲ್ಲಿ ನೀರು ನಿಂತ ಪರಿಣಾಮ ಟ್ಯಾನರಿ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಬೆಂಗಳೂರು(ಆ.01): ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇತ್ತು. ಆದರೆ, ಸಂಜೆಯಾಗುತ್ತಿದಂತೆ ನಗರಾದ್ಯಂತ ಧಾರಾಕಾರವಾಗಿ ಸುಮಾರು ಒಂದು ಗಂಟೆಗೂ ಅಧಿಕ ಮಳೆಯಾಗಿದ್ದು ಅದರಲ್ಲೂ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದು ನಗರದ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆಯಾಯಿತು.
ಬೆಂಗಳೂರಿನ ವಿಜಯನಗರ, ಕೆಆರ್ ಮಾರುಕಟ್ಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಜಾಲಹಳ್ಳಿ ಹೀಗೆ ಹಲವೆಡೆ ಧಾರಾಕಾರ ಮಳೆ ಬೀಳುತ್ತಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಳೆರಾಯ ಅಡೆಚಣೆ ಉಂಟು ಮಾಡಿದ್ದು ಮೆಟ್ರೋ ಪಿಲ್ಲರ್ ಹಾಗೂ ಅಂಗಡಿ ಮುಗ್ಗಟ್ಟುಗಳ ಆಶ್ರಯವನ್ನು ಪಡೆದು ಸವಾರರು ನಿಂತಿರುವ ದೃಶ್ಯಗಳು ಕಂಡು ಬಂದಿವೆ.
ಆಟೋ, ಕಾರು ಇನ್ನಿತರ ವಾಹನಗಳು ಜಖಂ
ನಗರದ ಅಲಿ ಅಸ್ಕರ್ ರಸ್ತೆಯಲ್ಲಿ ಮರ ಧರೆಗುರುಳಿದ್ದು, ಕೊಂಬೆಗಳು ಒಂದು ಆಟೋ, ಎರಡು ಕಾರುಗಳ ಮೇಲೆ ಬಿದ್ದು, ವಾಹನಗಳು ಜಖಂ ಆಗಿವೆ . ಆಟೋ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆಯಲ್ಲಿ ಬಿದ್ದಿರುವ ಮರದ ಕೊಂಬೆಗಳನ್ನು ಬಿಬಿಎಂಪಿ ಅರಣ್ಯ ಸಿಬ್ಬಂದಿ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಮತ್ತೊಂದೆಡೆ ಸಿ.ಮಹದೇವಪುರ, ಶಾಂತಿನಗರ, ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ದಾಸರಹಳ್ಳಿಯಲ್ಲಿ ತಲಾ ಒಂದು ಮರ ಸಂಪೂರ್ಣವಾಗಿ ಧರೆಗುರುಳಿವೆ.ವಿ.ರಾಮನ್ನಗರ, ಪುಲಕೇಶಿನಗರ, ಕೆ.ಆರ್. ಪುರದಲ್ಲಿ ತಲಾ ಎರಡು ಮರ ಧರೆಗುರುಳಿವೆ ಮತ್ತು ವಿವಿಧ ಭಾಗದಲ್ಲಿ 40ಕ್ಕೂ ಅಧಿಕ ಕಡೆ ಮರ ಕೊಂಬೆ ಧರೆಗುರುಳಿದ್ದು ಸಂಪೂರ್ಣ ಬಂದ್ ಆಗಿದ್ದು ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಕಾರ್ಯಾಚರಣೆ, ಕಳೆದ 6 ತಿಂಗಳಲ್ಲಿ ಸಂಚಾರ ಉಲ್ಲಂಘನೆಗಾಗಿ 1390 ಡಿಎಲ್ ಅಮಾನತು!
ನಗರದ ವಿವಿಧ ಭಾಗಗಳಲ್ಲಿ ಮಳೆಯ ಪ್ರಮಾಣ
- ನಗರದಲ್ಲಿ ಬುಧವಾರ ಸರಾಸರಿ 1.8 ಸೆಂ.ಮೀ. ಮಳೆಯಾಗಿದ್ದು, ಅತಿ ಹೆಚ್ಚು 4.4 ಸೆಂ. ಮೀ ಕೊಡಿಗೇಹಳ್ಳಿಯಲ್ಲಿ ಸುರಿದಿದೆ.
- ಯಲಹಂಕ 3.6 ಸೆಂ.ಮೀ.
- ಬಸವೇಶ್ವರ ನಗರ 3.9 ಸೆಂ. ಮೀ
- ಚೌಡೇಶ್ವರಿ 3.5.ಸೆಂ.ಮೀ
- ನಂದಿನಿ ಲೇಔಟ್ ಹಾಗೂ ವಿ. ನಾಗೇನಹಳ್ಳಿಯಲ್ಲಿ ತಲಾ 3.2 ಸೆಂ. ಮೀ
- ಕೋನೇನ ಆಗ್ರಹಾರ 3ಸೆಂ. ಮೀ
- ವನ್ನಾರ್ ಪೇಟೆ, ಪಶ್ಚಿಮ ಬಾಣಸವಾಡಿಯಲ್ಲಿ ತಲಾ 2.9 ಸೆಂ.ಮೀ
- ದೊಡ್ಡಾನೆಕುಂದಿ 3.1 ಸೆಂ. ಮೀ
- ನಗರದ 56 ಪ್ರದೇಶದಲ್ಲಿ 1 ಸೆಂ.ಮೀಗೂ ಅಧಿಕ ಮಳೆಯಾಗಿದೆ ಎಂದು ಕೆಎಸ್ಎನ್ಡಿಎಂಸಿ ಮಾಹಿತಿ ನೀಡಿದೆ.
ಭಾರೀ ಮಳೆ ಬೆನ್ನಲ್ಲೆ ಬಜ್ಜಿ ಬೋಂಡಾ ಮತ್ತು ಕಾಫಿ, ಟೀ ಗೆ ಹೆಚ್ಚಿದ ಬೇಡಿಕೆ ಹೆಚ್ಚಾಗಿದ್ದು ಅಂಗಡಿಗಳಲ್ಲಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.ಒಟ್ಟಿನಲ್ಲಿ ಸಂಜೆ ಮಳೆ ಹಲವೆಡೆ ಕಿರಿಕಿರಿ ತಂದಿದ್ದರೂ, ಕಳೆದ ಕೆಲ ದಿನಗಳಿಂದಲೂ ಇಷ್ಟೊಂದು ಜೋರು ಮಳೆ ಬಿದ್ದೇ ಇಲ್ಲ ಎನ್ನುವಂತೆ ಜನ ಮಳೆಯನ್ನು ಆನಂದಿಸುತ್ತಿದ್ದಾರೆ.
Latest Trending
- ಕೇರಳದ ವಯನಾಡ್ ಭೂಕುಸಿತ ದುರಂತಕ್ಕೆ: 275 ಸಾವು, 240 ನಾಪತ್ತೆ
- ಕರ್ನಾಟಕದ ಈ ಜಿಲ್ಲೆಗಳಲ್ಲಿ ಆ.6 ರವರೆಗೆ ಭಾರೀ ಮಳೆ ಮುನ್ಸೂಚನೆ! ರೆಡ್ ಅಲರ್ಟ್!
- ಬೆಂಗಳೂರು ಮಾಲ್ಗಳಿಗೆ ಶೀಘ್ರದಲ್ಲೇ ಹೊಸ ನಿಯಮ
- ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭ
Follow us on Instagram Bangalore Today