Nice Road Speed Limit: ನೈಸ್ ರಸ್ತೆಯಲ್ಲಿ ಲೇನ್ ಉಲ್ಲಂಘನೆ, ಅತಿವೇಗದ ಚಾಲನೆ ಬಗ್ಗೆ ಎಚ್ಚರ; ಲೇಸರ್ ಟ್ರ್ಯಾಕ್ ಗನ್ ಅಳವಡಿಕೆ


 Nice Road Speed Limit: ಬೆಂಗಳೂರು ಟ್ರಾಫಿಕ್ ಪೊಲೀಸರು ನೈಸ್ ರಸ್ತೆಯಲ್ಲಿ ಅತಿವೇಗ ಮತ್ತು ಲೇನ್ ಶಿಸ್ತು ಕಾಪಾಡದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಲೇಸರ್ ಟ್ರ್ಯಾಕ್ ಗನ್ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸುವ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ. ಹಾಗಾದರೆ ಯಾವ ವಾಹನದ ವೇಗದ ಮಿತಿ ಎಷ್ಟು? ಯಾವ ಪಥದಲ್ಲಿ ಯಾವ ವಾಹನ ಸಂಚರಿಸಬೇಕು? ತಪ್ಪಾದರೆ ಏನಾಗುತ್ತದೆ? ಎಲ್ಲಾ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 9: ನೈಸ್ ರಸ್ತೆಯಲ್ಲಿ ಅತಿವೇಗದ ಚಾಲಕರನ್ನು ನಿಯಂತ್ರಿಸಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ನೈಸ್ ರಸ್ತೆಯಲ್ಲಿ ಅತಿ ವೇಗದಲ್ಲಿ ವಾಹನ ಚಲಾಯಿಸುವವರ ಮೇಲೆ ನಿಗಾ ಇಡಲು ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದ್ದು, ಈ ಮೂಲಕ ಅತಿವೇಗದ ವಾಹನ ಚಾಲಕರನ್ನು ಪತ್ತೆ ಹಚ್ಚಿ 1000 ರೂ. ಕಳೆದ ಒಂದು ವಾರದಿಂದ ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದೆ.

Nice Road Speed Limit

ಏನಿದು ಲೇಸರ್ ಟ್ರ್ಯಾಕ್ ಗನ್?

ಲೇಸರ್ ಟ್ರ್ಯಾಕ್ ಗನ್ ಎನ್ನುವುದು ವಾಹನಗಳು ಚಲಿಸುವ ವೇಗವನ್ನು ಪತ್ತೆಹಚ್ಚುವ ಸಾಧನವಾಗಿದೆ. ನೈಸ್ ರಸ್ತೆಯುದ್ದಕ್ಕೂ ಅಲ್ಲಲ್ಲಿ ಈ ಸಾಧನವನ್ನು ಹೊಂದಿರುವ ಸಂಚಾರಿ ಪೊಲೀಸರು ಪ್ರಯಾಣಿಕರಿಗೆ ಅರಿವು ತಪ್ಪಿಸಲು ಇದ್ದಾರೆ. ನಿಗದಿತ ಮಿತಿಗಿಂತ ವೇಗವಾಗಿ ಚಲಿಸುವ ವಾಹನವನ್ನು ಲೇಸರ್ ಟ್ರ್ಯಾಕ್ ಗನ್ ಸೆರೆಹಿಡಿಯುತ್ತದೆ. 

ಈ ಯಂತ್ರವು ವಾಹನದ ಸಂಖ್ಯೆಯನ್ನು ಪತ್ತೆ ಮಾಡುತ್ತದೆ. ಲೇಸರ್ ಟ್ರ್ಯಾಕ್ ಗನ್ ಅನ್ನು ಇರಿಸಲಾಗಿರುವ ಟೋಲ್‌ಗೆ ವಾಹನದ ಮಾಹಿತಿ ಹೋಗುತ್ತದೆ. ಟೋಲ್ ಬಳಿ ಇರುವ ಸಿಬ್ಬಂದಿಗೆ ವಾಟ್ಸಾಪ್ ಮೂಲಕ ವಾಹನದ ಫೋಟೋ ಮತ್ತು ನಂಬರ್ ರವಾನೆಯಾಗುತ್ತದೆ. ಟೋಲ್ ಬಳಿ ವಾಹನದ ವೇಗ ಕಡಿಮೆಯಾದಾಗ ಸಂಚಾರ ಪೊಲೀಸರು ವಾಹನ ನಿಲ್ಲಿಸಿ ದಂಡ ವಸೂಲಿ ಮಾಡುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ಟನಲ್ ರಸ್ತೆ; ಯಾವ ಮಾರ್ಗದಲ್ಲಿ ನೋಡಿ

ಕಳೆದ ಒಂದು ವಾರದಿಂದ ನಡೆಯುತ್ತಿದೆ ಕಾರ್ಯಾಚರಣೆ!

ಕಳೆದ ಒಂದು ವಾರದಿಂದ ಲೇಸರ್ ಟ್ರ್ಯಾಕ್ ಗನ್ ಗಳ ಮೂಲಕ ಅತಿವೇಗದ ಚಾಲನೆ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ಪ್ರತಿಯೊಂದು ರೀತಿಯ ವಾಹನವು ತನ್ನದೇ ಆದ ವೇಗದ ಮಿತಿಯನ್ನು ಹೊಂದಿದೆ. ವೇಗದ ಮಿತಿಯನ್ನು ಮೀರಿದರೆ ದಂಡ ವಿಧಿಸಲಾಗುತ್ತದೆ. ಇದಲ್ಲದೇ ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸಬೇಕು. ಹಳಿ ದಾಟಿದರೂ ದಂಡ ಕಟ್ಟಬೇಕಾಗುತ್ತದೆ.

 ವಾಹನಗಳ ವೇಗದ ಮಿತಿ ಎಷ್ಟು?

8 ಜನರಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಗಂಟೆಗೆ 120 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. 8ಕ್ಕಿಂತ ಹೆಚ್ಚು ಜನರ ಸಾಮರ್ಥ್ಯವಿರುವ ವಾಹನಗಳ ವೇಗದ ಮಿತಿ ಗಂಟೆಗೆ 80 ಕಿ.ಮೀ.

ಯಾವ ಟ್ರ್ಯಾಕ್ ನಲ್ಲಿ ಯಾವ ವಾಹನ ಸಂಚರಿಸಬೇಕು?

ಕಾರುಗಳು ನೈಸ್ ರಸ್ತೆಯ ಬಲಭಾಗದಲ್ಲಿ ಚಲಿಸಬೇಕು. ಬಲಭಾಗದಲ್ಲಿ ಚಲಿಸುವ ಕಾರುಗಳ ವೇಗದ ಮಿತಿ ಗಂಟೆಗೆ 120 ಕಿಮೀ ಆಗಿರಬೇಕು. ಗಂಟೆಗೆ 121 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗಕ್ಕೆ ದಂಡ ವಿಧಿಸಲಾಗುತ್ತದೆ.

ಬೈಕ್‌ಗಳು ಮತ್ತು ಸರಕು ಸಾಗಣೆ ವಾಹನಗಳು ರಸ್ತೆಯ ಎಡಭಾಗದ ಟ್ರ್ಯಾಕ್‌ನಲ್ಲಿ ಚಲಿಸಬೇಕು. ಈ ವಾಹನಗಳ ವೇಗದ ಮಿತಿ ಗಂಟೆಗೆ 80 ಕಿ.ಮೀ. ಗಂಟೆಗೆ 81 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ದಂಡ ವಿಧಿಸಲಾಗುತ್ತದೆ. ಲೇಸರ್ ಟ್ರ್ಯಾಕ್ ಗನ್ ಸಹಾಯದಿಂದ ನಿತ್ಯ 30ರಿಂದ 35 ಪ್ರಕರಣಗಳು ದಾಖಲಾಗುತ್ತಿವೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *