Get flat 10% off on Wonderla Entry Tickets | Use coupon code "BTWONDER".
Karnataka: ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ; ಇಲ್ಲಿದೆ ಸಂಪೂರ್ಣ ವಿವರ
Karnataka: ರಾಜ್ಯದಲ್ಲಿ 2023ರಲ್ಲಿ ಬಿಪಿಎಲ್ ಕಾರ್ಡ್ ತಿದ್ದುಪಡಿಗಾಗಿ ಹೊಸದಾಗಿ ಸಲ್ಲಿಸಿರುವ ಮೂರು 3.70 ಲಕ್ಷ ಬಿಪಿಎಲ್ ಕಾರ್ಡ್‌ಗಳಲ್ಲಿ 1,17,646 ಬಿಪಿಎಲ್ ಕಾರ್ಡ್‌ಗಳಿಗೆ ರಾಜ್ಯ ಸರ್ಕಾರದ ಆಹಾರ ಇಲಾಖೆಯಿಂದ ಅನುಮೋದನೆ ನೀಡಲಾಗಿದ್ದು, 3.70 ಲಕ್ಷ ಕಾರ್ಡ್‌ಗಳಲ್ಲಿ 93362 ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿಗಳನ್ನು ತಿರಸ್ಕರಿಸಿದ. ಆಹಾರ ಇಲಾಖೆ ನಿಯಮಾವಳಿ ಮೀರಿ ತಿದ್ದುಪಡಿಗೆ ಅರ್ಜಿ ಸಲ್ಲಿಸದವರಿಗೆ ಶಾಕ್ ನೀಡಿದೆ.
ಬೆಂಗಳೂರು, ಸೆಪ್ಟೆಂಬರ್ 21: 2023 ರಲ್ಲಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಿದ್ದುಪಡಿ ಮಾಡಲು ಅವಕಾಶ ನೀಡಲು ರಾಜ್ಯ ಸರ್ಕಾರದ ಆಹಾರ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಯಿತು, ತಿದ್ದುಪಡಿಯಲ್ಲಿ ಹೆಸರು ಬದಲಾವಣೆ ಮತ್ತು ಹೊಸ ಫಲಾನುಭವಿಗಳ ಸೇರ್ಪಡೆಗೆ ಮಾತ್ರ ಅವಕಾಶ ನೀಡಲಾಯಿತು.
ಇದನ್ನೂ ಓದಿ; ಸೆ. 21 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸಂಪೂರ್ಣ ವಿವರ ಪರಿಶೀಲಿಸಿ
ಒಟ್ಟು 117646 ಬಿಪಿಎಲ್ ಕಾರ್ಡ್‌ಗಳ ತಿದ್ದುಪಡಿಗೆ ಆಹಾರ ಇಲಾಖೆಯಿಂದ ಅಸ್ತು!
ಕಳೆದ ತಿಂಗಳು 53219 ಫಲಾನುಭವಿಗಳು ಹೊಸ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದು, 3 ಲಕ್ಷ 70 ಸಾವಿರ ಅರ್ಜಿಗಳು ತಿದ್ದುಪಡಿಗೆ ಸಲ್ಲಿಕೆಯಾಗಿದ್ದು, ಈ ಪೈಕಿ 117646 ಬಿಪಿಎಲ್ ಕಾರ್ಡ್‌ಗಳ ತಿದ್ದುಪಡಿಗೆ ಆಹಾರ ಇಲಾಖೆಯಿಂದ ಅಸ್ತು, 3.70 ಲಕ್ಷ ಕಾರ್ಡ್‌ಗಳಲ್ಲಿ 93362 ಬಿಪಿಎಲ್ ಕಾರ್ಡ್ ಅರ್ಜಿಗಳು ತಿರಸ್ಕೃತವಾಗಿವೆ. ಆಹಾರ ಇಲಾಖೆ ನಿಯಮಾವಳಿ ಮೀರಿ ತಿದ್ದುಪಡಿಗೆ ಅರ್ಜಿ ಸಲ್ಲಿಸದವರಿಗೆ ಶಾಕ್ ನೀಡಿದೆ.
Image Credits: kannada.news18.com
ಹಾಗೂ ಶೀಘ್ರದಲ್ಲಿಯೇ ಹೊಸ ಬಿಪಿಎಲ್ ಕಾರ್ಡ್ ಗೆ ಇಲಾಖೆ ಅನುಮತಿ ನೀಡಲಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮತ್ತು ಈಗಾಗಲೇ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ; ಅಕ್ಟೋಬರ್‌ನಲ್ಲಿ ಚೀನಾದಿಂದ ನಮ್ಮ ಮೆಟ್ರೋಗೆ ಚಾಲಕ ರಹಿತ ಮೆಟ್ರೋ ರೈಲು
ಗೃಹ ಲಕ್ಷ್ಮೀ ಯೋಜನೆ ಹಣ 28 ಲಕ್ಷ ಫಲಾನುಭವಿಗಳಿಗೆ ತಲುಪಿಲ್ಲ!
ಆರು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳಲ್ಲಿ ಮನೆಯ ಮುಖ್ಯಸ್ಥರು ಪುರುಷರೇ ಆಗಿರುವುದರಿಂದ 28 ಲಕ್ಷ ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಯೋಜನೆ ಹಣ ತಲುಪಿಲ್ಲ. ಹಾಗಾಗಿ ಸೆ.1ರಿಂದ ಮನೆಯ ಮುಖ್ಯಸ್ಥರ ಹೆಸರು ಬದಲಾವಣೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಬಿಪಿಎಲ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಪುರುಷರೇ ಆಗಿರುವುದರಿಂದ ಮನೆ ಮುಖ್ಯಸ್ಥರ ಹೆಸರನ್ನು ಬದಲಾಯಿಸಲು ಸರ್ಕಾರ ಅನುಮತಿ ನೀಡಿದೆ.
ತಿದ್ದುಪಡಿ ಅರ್ಜಿ ರಿಜೆಕ್ಟ್ ಆಗಲು ಕಾರಣವೇನು?
- ರಕ್ತಸಂಬಂಧ ಇಲ್ಲದವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ.
- ಸೊಸೆ ಇಬ್ಬರೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿ ಆಗಲು ಪ್ರತ್ಯೇಕ ಆಗಲು ಡಿಲಿಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
- ಕೆಲವರು ಕುಟುಂಬ ಸದಸ್ಯರು ಬೇರ್ಪಡೆ ತೋರಿಸಿದ್ದಾರೆ.
- ಸರ್ಕಾರಿ ಕೆಲಸದಲ್ಲಿದ್ದವರು ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಎಲ್ಲರಿಗೂ ತಲಾ ಎರಡು ಸಾವಿರ ಹಣ ಇನ್ನೂ ಹೋಗಿಲ್ಲ, 1.13 ಕೋಟಿ ಮನೆಯೊಡತಿಯರಲ್ಲಿ 82 ಲಕ್ಷ ಅರ್ಜಿದಾರರಿಗೆ ಹಣ ವರ್ಗಾವಣೆ ಆಗಿದೆ, ಇನ್ನುಳಿದ 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ.
Latest Trending
- ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸೆ. 25 ರಿಂದ ಚಾಲನೆ,
- Bangalore: ಸೆ.21ರಂದು ಈ ಭಾಗದಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ
- 500 ಕೋಟಿ ವೆಚ್ಚದಲ್ಲಿ ಕರ್ನಾಟಕಕ್ಕೆ 1,020 ಹೊಸ ಬಸ್.
- ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು
Follow us on Instagram Bangalore Today