Get flat 10% off on Wonderla Entry Tickets | Use coupon code "BTWONDER".
Gold Rate Today on Dec 05: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ಎಷ್ಟಿದೆ ನೋಡಿ!
Gold Rate Today: ಡಿಸೆಂಬರ್ 5 ರಂದು, ಬೆಂಗಳೂರು ಸೇರಿದಂತೆ ಭಾರತದ ಇತರ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ, ಇದು ಪ್ರತಿ ಗ್ರಾಂಗೆ 100 ರೂ ಇಳಿಕೆ ಕಂಡಿದೆ, ಆ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ 5,785 ಮತ್ತು 24 ಕ್ಯಾರೆಟ್ ಬೆಲೆಯನ್ನು ಅಪರಂಜಿ ಚಿನ್ನ ಪ್ರತಿ ಗ್ರಾಂಗೆ 6,31೧ ರೂ ನಿಗದಿಪಡಿಸಲಾಗಿದೆ, ಆದ್ದರಿಂದ ಇಂದು ಚಿನ್ನವನ್ನು ಖರೀದಿಸುವವರು ಇಂದು ಉತ್ತಮ ಉಳಿತಾಯವನ್ನು ಪಡೆಯುತ್ತಾರೆ.
Bengaluru, Dec 05: ಬೆಂಗಳೂರಿನಲ್ಲಿ ನವೆಂಬರ್ ತಿಂಗಳ ನಂತರ ಡಿಸೆಂಬರ್ನಲ್ಲಿ ಗರಿಷ್ಠ ಬೆಲೆ ತಲುಪಿದ ನಂತರ ಚಿನ್ನದ ಬೆಲೆ ಏಕಾಏಕಿ ಇಳಿಕೆ ಕಂಡಿದೆ, ಹೀಗಾಗಿ ಪ್ರತಿ ಗ್ರಾಂ ಚಿನ್ನಕ್ಕೆ ೧೦೦ ರೂಪಾಯಿ ಇಳಿಕೆಯಾಗಿದ್ದು, ರಾಜ್ಯದ ಚಿನ್ನಾಭರಣ ಖರೀದಿದಾರರಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದು.
ನಗರದಲ್ಲಿ ಇಂದಿನ ಚಿನ್ನದ ಬೆಲೆ ಇಂತಿದೆ: 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 57,850 ರೂ. ಹಾಗೂ 24 ಕ್ಯಾರೆಟ್ ಅಪರಂಜಿ ಚಿನ್ನ 10 ಗ್ರಾಂಗೆ 63,110 ರೂ.ಗೆ ದಾಖಲಾಗಿದ್ದು, ಚಿನ್ನದ ಬೆಲೆಯಲ್ಲಿ ಇಂದು ಸಂಜೆಯ ಹೊತ್ತಿಗೆ ನಗರದಲ್ಲಿ ಮತ್ತಷ್ಟು ವ್ಯತ್ಯಯವಾಗುವ ಸಾಧ್ಯತೆ ಇದೆ. ನಗರದಲ್ಲಿ 10 ಗ್ರಾಂ ಬೆಳ್ಳಿ ಬೆಲೆ 790 ರೂ.ಗಳಾಗಿದ್ದು, 100 ಗ್ರಾಂ ಬೆಳ್ಳಿ 7900 ರೂ.ಗೆ ದಾಖಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದೆ, ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ, ಆದರೆ ಈಗ ಅಮೆರಿಕದ ಆರ್ಥಿಕತೆ ಹೆಚ್ಚುತ್ತಿರುವ ಕಾರಣ, ಚಿನ್ನ ಮತ್ತು ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ, ಆದ್ದರಿಂದ ಚಿನ್ನದ ಬೆಲೆಯು ಇದರಿಂದ ಪ್ರಭಾವಿತವಾಗಿದೆ ಮತ್ತು ಚಿನ್ನದ ಬೆಲೆ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡಿತ್ತು. ಇಂದು ಪ್ರತಿ ಗ್ರಾಂ ಚಿನ್ನಕ್ಕೆ ನೂರು ರೂಪಾಯಿ ಇಳಿಕೆಯಾಗಿದ್ದು ಚಿನ್ನ ಖರೀದಿದಾರರಿಗೆ ಕೊಂಚ ನಿಟ್ಟುಸಿರು ಬಿಟ್ಟಿದೆ.
ಇದನ್ನೂ ಓದಿ; Accident: ನಾಯಂಡಹಳ್ಳಿ ಬಳಿ ಕಾರು ಮತ್ತು ಬಸ್ ನಡುವೆ ಅಪಘಾತ: ಕಾರು ಮತ್ತು ಬಿಎಂಟಿಸಿ ಬಸ್ಗೆ ಬೆಂಕಿ,
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,850 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,110 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 790 ರೂ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ! 22 ಕ್ಯಾರಟ್ (10 ಗ್ರಾಂಗೆ)
- ಬೆಂಗಳೂರು: 58,850 ರೂ
- ಚೆನ್ನೈ: 59,750 ರೂ
- ಮುಂಬೈ: 58,850 ರೂ
- ದೆಹಲಿ: 59,000 ರೂ
- ಕೋಲ್ಕತಾ: 58,850 ರೂ
- ಕೇರಳ: 58,850 ರೂ
- ಅಹ್ಮದಾಬಾದ್: 58,900 ರೂ
- ಜೈಪುರ್: 59,000 ರೂ
- ಲಕ್ನೋ: 59,000 ರೂ
- ಭುವನೇಶ್ವರ್: 58,850 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):
- ಮಲೇಷ್ಯಾ: 3,140 ರಿಂಗಿಟ್ (56,208 ರೂಪಾಯಿ)
- ದುಬೈ: 2,507.50 ಡಿರಾಮ್ (56,928 ರೂಪಾಯಿ)
- ಅಮೆರಿಕ: 690 ಡಾಲರ್ (57,527 ರೂಪಾಯಿ)
- ಸಿಂಗಾಪುರ: 954 ಸಿಂಗಾಪುರ್ ಡಾಲರ್ (59,562 ರೂಪಾಯಿ)
- ಕತಾರ್: 2,530 ಕತಾರಿ ರಿಯಾಲ್ (57,861 ರೂ)
- ಸೌದಿ ಅರೇಬಿಯಾ: 2,580 ಸೌದಿ ರಿಯಾಲ್ (57,342 ರೂಪಾಯಿ)
- ಓಮನ್: 266 ಒಮಾನಿ ರಿಯಾಲ್ (57,677 ರೂಪಾಯಿ)
- ಕುವೇತ್: 210.50 ಕುವೇತಿ ದಿನಾರ್ (56,830 ರೂಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,900 ರೂ
- ಚೆನ್ನೈ: 8,350 ರೂ
- ಮುಂಬೈ: 8,050 ರೂ
- ದೆಹಲಿ: 8,050 ರೂ
- ಕೋಲ್ಕತಾ: 8,050 ರೂ
- ಕೇರಳ: 8,350 ರೂ
- ಅಹ್ಮದಾಬಾದ್: 8,050 ರೂ
- ಜೈಪುರ್: 8,050 ರೂ
- ಲಕ್ನೋ: 8,050 ರೂ
- ಭುವನೇಶ್ವರ್: 8,350 ರೂ
(ಗಮನಿಸಿ: ಇಲ್ಲಿ ನೀಡಲಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿಖರವಾಗಿರುತ್ತವೆ ಎಂದು ಖಾತರಿಪಡಿಸಲಾಗುವುದಿಲ್ಲ. ಇದು ಪ್ರಮುಖ ಆಭರಣ ವ್ಯಾಪಾರಿಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದೆ. ಅಲ್ಲದೆ, ಈ ಬೆಲೆಗಳು GST, ಮೇಕಿಂಗ್ ಶುಲ್ಕಗಳು ಇತ್ಯಾದಿಗಳಿಗೆ ಒಳಪಟ್ಟಿರಬಹುದು.)
Latest Trending
- ಕರ್ನಾಟಕಕ್ಕೆ ಚೀನಾ ಮೂಲದ ಎಚ್9ಎನ್2 ವೈರಸ್ ಭೀತಿ!
- ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today Bangalore Today