Gold Rate Today in Bangalore: ಅ. 21 ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳ? ಎಷ್ಟಿದೆ ನೋಡಿ

Gold Rate Today in Bangalore: ಬೆಂಗಳೂರಿನಲ್ಲಿ ಅಕ್ಟೋಬರ್ 21 ರಂದು, ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನದ ಮೇಲೆ 20 ರೂ ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 22 ರೂ ಏರಿಕೆಯಾಯಿತು, ಆ ಮೂಲಕ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ 5,660 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 6,175 ರೂ ನಿಗದಿಯಾಗಿದೆ.

ದೇಶದೆಲ್ಲೆಡೆ ನವರಾತ್ರಿ ಹಬ್ಬದ ಪ್ರಯುಕ್ತ ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಇದರಿಂದ ಚಿನ್ನದ ಬೆಲೆ ಏರಿಕೆಯಾಗಿದ್ದು, ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಸಾಕಷ್ಟು ಏರಿಕೆ ಕಾಣುತ್ತಿದೆ.

Gold Rate Today in Bangalore

Bangalore, October 21; ಬೆಂಗಳೂರಿಗೆ ನಾಡ ಹಬ್ಬ ದಸರಾ ಕಾವು ತಟ್ಟಿದ್ದರಿಂದ ಕಳೆದ ಒಂದು ವಾರದಿಂದ ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 200 ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 10 ಗ್ರಾಂಗೆ 220 ರೂ ಏರಿಕೆ ಕಂಡಿದೆ, ಆ ಮೂಲಕ ಚಿನ್ನ ಖರೀದಿದಾರರಿಗೆ ಶಾಕ್ ನೀಡಿದೆ.

ಇದನ್ನೂ ಓದಿ; ಅಕ್ಟೋಬರ್‌ನಲ್ಲಿ ಚೀನಾದಿಂದ ನಮ್ಮ ಮೆಟ್ರೋಗೆ ಚಾಲಕ ರಹಿತ ಮೆಟ್ರೋ ರೈಲು: ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,750 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!

ದೇಶಾದ್ಯಂತ ನವರಾತ್ರಿಯ ಕಾರಣ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ವ್ಯತ್ಯಾಸವಿದೆ, ನಾವು ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಯನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಚೆನ್ನೈ: 

ತಮಿಳುನಾಡು ರಾಜ್ಯಧಾನಿ ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ ಗ್ರಾಂಗೆ 5,670 ರೂಪಾಯಿಗಳು ನಿಗದಿಯಾಗಿದೆ ಹಾಗೂ 24 ಕ್ಯಾರಟ್ ಚಿನ್ನದ ಮೇಲೆ ಪ್ರತಿ ಗ್ರಾಂಗೆ 6,140 ರೂ ನಿಗದಿಯಾಗಿದೆ.

ದೆಹಲಿ: 

ಭಾರತದ ರಾಜಧಾನಿ ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,190 ಕ್ಕೆ ನಿಗದಿಯಾಗಿದೆ, ಆ ಮೂಲಕ ನಿನ್ನೆಯ ಬೆಲೆಗಿಂತ 21 ರೂಪಾಯಿ ಏರಿಕೆಯಾಗಿದೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,675 ರೂ ನಿನ್ನೆಯ ಬೆಲೆಗಿಂತ 20 ರೂಪಾಯಿ ಏರಿಕೆಯನ್ನು ಕಂಡಿದೆ.

ವಿದೇಶಗಳಲ್ಲಿ ಚಿನ್ನದ ಬೆಲೆ: 22 ಕ್ಯಾರಟ್ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (50,544 ರುಪಾಯಿ)
  • ದುಬೈ: 2162.50 ಡಿರಾಮ್ (48,898 ರುಪಾಯಿ)
  • ಅಮೆರಿಕ: 595 ಡಾಲರ್ (49,459 ರುಪಾಯಿ)
  • ಸಿಂಗಾಪುರ: 820 ಸಿಂಗಾಪುರ್ ಡಾಲರ್ (49,829 ರುಪಾಯಿ)
  • ಕತಾರ್: 2,245 ಕತಾರಿ ರಿಯಾಲ್ (51,186 ರೂ)
  • ಓಮನ್: 236.50 ಒಮಾನಿ ರಿಯಾಲ್ (51,058.46 ರುಪಾಯಿ)
  • ಕುವೇತ್: 187 ಕುವೇತಿ ದಿನಾರ್ (50,321 ರುಪಾಯಿ)

Latest Trending

Follow us on Instagram Bangalore Today

Leave a Reply

Your email address will not be published. Required fields are marked *