BBMP: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಬಿಬಿಎಂಪಿಯಿಂದ ಮೊಬೈಲ್ ಆ್ಯಪ್ ಬಿಡುಗಡೆ

BBMP: ತ್ವರಿತ ಬೆಳವಣಿಗೆಗೆ ಹೆಸರುವಾಸಿಯಾದ  ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಗುಂಡಿಗಳು ವಾಹನಗಳನ್ನು ಹಾನಿಗೊಳಿಸುವುದಲ್ಲದೆ ರಸ್ತೆ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  (BBMP) ‘ರಸ್ತೆ ಗುಂಡಿಗಳ ಗಮನ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

BBMP

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಹಾಗೂ ನಿಗದಿತ ಅವಧಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿ ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’’  ಸಿದ್ಧಪಡಿಸಿದೆ.ಈ ತಂತ್ರಾಂಶ ಅಳವಡಿಸುವುದರಿಂದ ಎಲ್ಲ ರಸ್ತೆಗಳಲ್ಲಿ ಉಂಟಾಗಬಹುದಾದ ಗುಂಡಿಗಳನ್ನು ಜಿಪಿಎಸ್ ಅಕ್ಷಾಂಶ ಮತ್ತು ರೇಖಾಂಶದಲ್ಲಿ ನಿಖರವಾಗಿ ಗುರುತಿಸಿ, ಮೊಬೈಲ್‌ನಲ್ಲಿ ಗುಂಡಿಯ ಅಳತೆಯನ್ನು ನಮೂದಿಸಲಾಗುತ್ತದೆ.

ಪ್ರತ್ಯೇಕ ಕಾರ್ಯಾದೇಶ ತಯಾರಿಸಿ ಪ್ರತಿಯೊಂದು ರಸ್ತೆ ಗುಂಡಿಯನ್ನು ಮುಚ್ಚಲು ಕ್ರಮವಹಿಸುವ ಪದ್ಧತಿಯನ್ನು ಮೊಬೈಲ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ರಸ್ತೆ ಗುಂಡಿ ವೆಚ್ಚದ ಮೇಲೆ ನಿಯಂತ್ರಣ ಮತ್ತು ಹೊಣೆಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಿಗಾ ಇಡಬಹುದಾಗಿದೆ.2024-25ನೇ ಸಾಲಿನಲ್ಲಿ ಪ್ರತಿ ವಾರ್ಡ್ ಗಳಿಗೆ 15 ಲಕ್ಷಗಳಂತೆ 225 ವಾರ್ಡ್‌ಗಳಿಗೆ ರೂ. 33.75 ಕೋಟಿಗಳನ್ನು ಮೀಸಲಿಡಲಾಗಿದೆ.

 ರಸ್ತೆಜಾಲ:

ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಇದ್ದು, ಈ ಪೈಕಿ ಸುಮಾರು 1,344.84 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ 11,533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆಗಳಾಗಿವೆ. ಈ ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬಾರಜು ಮತ್ತು ಒಳಚರಂಡಿ ಕೊಳವೆಗಳು, ಅನಿಲ ಕೊಳವೆಗಳು, ಒಎಫ್‌ಸಿ, ಕೆಪಿಟಿಸಿಎಲ್‌ನ ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಗಳ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆಗಳು ಹದಗೆಟ್ಟು ನಿರಂತರವಾಗಿ ರಸ್ತೆ ಗುಂಡಿಗಳು ಬೀಳುತ್ತಿವೆ.

ಇದನ್ನೂ ಓದಿ: ಕೆ-ರೈಡ್ ನಿಂದ ಮೆಜೆಸ್ಟಿಕ್- ದೇವನಹಳ್ಳಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಸಾರ್ವಜನಿಕರಿಗೂ ಅವಕಾಶ!

“ರಸ್ತೆ ಗುಂಡಿ ಗಮನ” ತಂತ್ರಾಂಶದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಬೆಂಗಳೂರು ಸಂಚಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ ಸಾರ್ವಜನಿಕರಿಗೂ ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮೊಬೈಲ್ ಆಪ್ ಕಾರ್ಯವಿಧಾನ ಹೇಗೆ?

  1. ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಿ: ನಿಮ್ಮ ಮೊಬೈಲ್ ಸಾಧನದಲ್ಲಿ ರಸ್ತೆ ಗುಂಡಿ ಗಮನ ಆಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  2. ನಿಮ್ಮ ಭಾಷೆಯನ್ನು ಆರಿಸಿ:ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ, ಕನ್ನಡ ಅಥವಾ ಇಂಗ್ಲಿಷ್.
  3. ನೋಂದಣಿ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು SMS ಮೂಲಕ ಒಂದು ಬಾರಿ ಪಾಸ್‌ವರ್ಡ್ ಸ್ವೀಕರಿಸಲು OTP ಕ್ಲಿಕ್ ಮಾಡಿ.
  4. ಲಾಗಿನ್: ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಲು ಸ್ವೀಕರಿಸಿದ OTP ಅನ್ನು ನಮೂದಿಸಿ.
  5. ಗುಂಡಿಯನ್ನು ವರದಿ ಮಾಡಿ: ಗುಂಡಿಯನ್ನು ವರದಿ ಮಾಡಲು “ರಸ್ತೆ ದುರಸ್ತಿ” ಮೇಲೆ ಕ್ಲಿಕ್ ಮಾಡಿದ ಕೂಡಲೆ ನೀವು ನಿಂತ ಜಾಗದ ವಿಳಾಸದ ಸಮೇತ ಲೊಕೇಶನ್ ತೋರಿಸಲಿದೆ.
  6. ವಿವರಗಳನ್ನು ಸೇರಿಸಿ: ಸ್ಥಳದಲ್ಲಿರುವ ರಸ್ತೆ ದುರಸ್ತಿಯ ಕುರಿತ ಫೋಟೋ ಹಾಕಿ ಸ್ಥಳದಲ್ಲಿರುವ ಸಮಸ್ಯೆಯ ಕುರಿತು ವಿವರಣೆ ಬರೆಯಬಹುದು.
  7. ಪರಿಶೀಲಿಸಿ ಮತ್ತು ಸಲ್ಲಿಸಿ: ದೂರು ಸಲ್ಲಿಸುವ ಮುಂಚೆ ಒಮ್ಮೆ ಪರಿಶೀಲಿಸಿಕೊಳ್ಳಲು ಕೂಡಾ ಅವಕಾಶವಿದ್ದು. ಎಲ್ಲವನ್ನು ಪರಿಶೀಲಿಸಿದ ನಂತರ ‘ಸಲ್ಲಿಸಿ’ ಎಂಬುದರ ಮೇಲೆ ಕ್ಲಿಕ್ ಮಾಡಿದರೆ, ದೂರು ದಾಖಲಾಗಿ ನಿಮಗೆ ದೂರಿನ ಸಂಖ್ಯೆ ಕೂಡಾ ಸಿಗಲಿದೆ.
  8. ನಿಮ್ಮ ದೂರನ್ನು ಟ್ರ್ಯಾಕ್ ಮಾಡಿ: ಅಪ್ಲಿಕೇಶನ್ ಮೂಲಕ ನಿಮ್ಮ ದೂರಿನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ.
  9.  9. ಪರಿಹಾರ: ದೂರು ದಾಖಲಾದ ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯದಲ್ಲಿ ದೂರನ್ನು ಬಗೆಹರಿಸಲಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *