Gold Rate Today in Bangalore: ಅ. 25 ಇಂದಿನ ಚಿನ್ನದ ಬೆಲೆಯಲ್ಲಿ ಸ್ಥಿರತೆ! ಎಷ್ಟಿದೆ ಈಗಲೇ ನೋಡಿ

Gold Rate Today in Bangalore: ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ, 22 ಕ್ಯಾರೆಟ್ ಚಿನ್ನದ ಬೆಲೆ 5,655 ರೂ. ಮತ್ತು 24 ಕ್ಯಾರೆಟ್ ಪ್ರತಿ ಗ್ರಾಂಗೆ 6,169 ರೂ, ನಿಗದಿಯಾಗಿದೆ, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿಗೆ ಚಿನ್ನದ ಬೆಲೆ ತಟಸ್ಥವಾಗಿದೆ, ಆದ್ದರಿಂದ ಇಂದು ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ  ಬದಲಾವಣೆಯ ಸಾಧ್ಯತೆಯಿದೆ.

ರಾಜ್ಯದಲ್ಲಿ ನಾಡ ಹಬ್ಬ ಆಚರಣೆ ಬಳಿಕ ಚಿನ್ನದ ಖರೀದಿಯಲ್ಲಿ ಕೊಂಚ ಇಳಿಕೆ ಕಾಣಬಹುದು, ಹೀಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದ್ದು, ಇಂದು ಸಂಜೆ ವೇಳೆಗೆ ಪ್ರತಿ ಗ್ರಾಂ ಚಿನ್ನದ ದರದ ಮೇಲೆ ಎಷ್ಟು ಇಳಿಕೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Gold Rate Today in Bangalore

Bangalore, October 25: ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಂಡುಬಂದಿಲ್ಲ, ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯ ಏರಿಳಿತವನ್ನು ಗಮನಿಸಿದರೆ, ಪ್ರತಿ ಗ್ರಾಂ ಚಿನ್ನದ ಮೇಲೆ 22 ಕ್ಯಾರೆಟ್ ಗೆ ಗರಿಷ್ಠ 70 ರೂಪಾಯಿ ಮತ್ತು 24 ಕ್ಯಾರೆಟ್ ಗೆ 77 ರೂ ಏರಿಕೆ ಕಂಡಿತ್ತು, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ಗರಿಷ್ಠ 31 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 34 ರೂಪಾಯಿ ಇಳಿಕೆಯನ್ನು ಕಂಡಿತ್ತು. ಈ ಮೂಲಕ ಇದೀಗ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ 5,655 ರೂ ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 6,169 ರೂ ನಿಗದಿಯಾಗಿದ್ದು, ಅದೇ ದರವನ್ನು ಕಾಯ್ದಿರಿಸಿಕೊಂಡಿದೆ.

ಇದನ್ನೂ ಓದಿ;  ಬೆಂಗಳೂರು-ಹೊಸೂರು ಮಾರ್ಗಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಪ್ರಮುಖ 11 ಕಂಪನಿಗಳು ಆಸಕ್ತಿ ತೋರಿವೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,690 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!

ಚೆನ್ನೈ: 

ತಮಿಳುನಾಡಿನ ಪ್ರಮುಖ ನಗರವಾದ ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ 20 ರೂ.ಗಳಷ್ಟು ಇಳಿಕೆ ಕಂಡಿದ್ದು, ಇಂದು ಪ್ರತಿ ಗ್ರಾಂಗೆ 5,655 ರೂ. ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಕಡಿತವನ್ನು ಕಂಡು ಪ್ರತಿ ಗ್ರಾಂಗೆ 6,125 ರೂ. ನಿಗದಿಯಾಗಿದೆ.

ದೆಹಲಿ: 

ಭಾರತದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,195 ರೂ ಆಗಿದೆ, ನಿನ್ನೆಯ ಬೆಲೆಗಿಂತ 11 ರೂ ಏರಿಕೆಯಾಗಿದೆ, 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 5,680 ರೂ.ಗೆ ನಿನ್ನೆಯ ಬೆಲೆಗಿಂತ 10 ರೂ ಹೆಚ್ಚಳ ಕಂಡಿದೆ.

ವಿದೇಶಗಳಲ್ಲಿ ಚಿನ್ನದ ಬೆಲೆ: 22 ಕ್ಯಾರಟ್ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (51,677 ರೂಪಾಯಿ)
  • ದುಬೈ: 2205 ಡಿರಾಮ್ (49,895 ರೂಪಾಯಿ)
  • ಅಮೆರಿಕ: 605 ಡಾಲರ್ (50,282 ರೂಪಾಯಿ)

Latest Trending

Follow us on Instagram Bangalore Today

Leave a Reply

Your email address will not be published. Required fields are marked *