Get flat 10% off on Wonderla Entry Tickets | Use coupon code "BTWONDER".
Gold Rate Today in Bangalore: ಸೆ. 22 ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ? ಈಗಲೇ ನೋಡಿ
Gold Rate Today in Bangalore: ಬೆಂಗಳೂರಿನಲ್ಲಿ ಸೆಪ್ಟೆಂಬರ್ 22 ರಂದು 22 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 5505 ರೂ.ಗೆ ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಳಿಕೆಯಾಗಿ 6005 ರೂ.ಗೆ ತಲುಪಿದೆ. ಈ ದಿನ ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
Bangalore, September 22: ಭಾರತದ ವಿವಿಧ ಪ್ರಮುಖ ನಗರಗಳಲ್ಲಿ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ, ಆದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ, ಇದು ಚಿನ್ನ ಖರೀದಿದಾರರಿಗೆ ಸಂತಸದ ಸುದ್ದಿಯಾಗಿದೆ.
ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬ ಮುಗಿದ ಬಳಿಕ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ನಿನ್ನೆಯ ಬೆಲೆಗೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಾಣದ ಕಾರಣ ನಿನ್ನೆಯ ಬೆಲೆಯಲ್ಲೇ ಬೆಳ್ಳಿ ಮುಂದುವರಿದಿದೆ.
ಇದನ್ನೂ ಓದಿ; ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ; ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಾಗಿ ಬದಲಾಗಿಲ್ಲ.
ಚೆನ್ನೈ:
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದರೆ 24 ಕ್ಯಾರೇಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5980 ಕ್ಕೆ ನಿಗದಿಯಾಗಿದೆ, ನಿನ್ನೆಯ ಬೆಲೆಗಿಂತ 20 ರೂಪಾಯಿ ಕಡಿಮೆಯಾಗಿದೆ, 22 ಕ್ಯಾರೇಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5980 ಕ್ಕೆ ನಿಗದಿಯಾಗಿದೆ, ನಿನ್ನೆಯ ಬೆಲೆಗಿಂತ 20 ರೂಪಾಯಿ ಕಡಿಮೆಯಾಗಿದೆ.
ದೆಹಲಿ:
ಭಾರತದ ರಾಜಧಾನಿ ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6020 ಕ್ಕೆ ನಿಗದಿಯಾಗಿದೆ, ನಿನ್ನೆಯ ಬೆಲೆಗಿಂತ 170 ರೂಪಾಯಿ ಇಳಿಕೆಯಾಗಿದೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5520 ರೂ ನಿನ್ನೆಯ ಬೆಲೆಗಿಂತ 150 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ; ಅಕ್ಟೋಬರ್‌ನಲ್ಲಿ ಚೀನಾದಿಂದ ನಮ್ಮ ಮೆಟ್ರೋಗೆ ಚಾಲಕ ರಹಿತ ಮೆಟ್ರೋ ರೈಲು: ಸಂಪೂರ್ಣ ವಿವರ ಇಲ್ಲಿದೆ
ವಿದೇಶಗಳಲ್ಲಿ ಚಿನ್ನದ ಬೆಲೆ: 22 ಕ್ಯಾರಟ್ (10 ಗ್ರಾಮ್ಗೆ):
- ಮಲೇಷ್ಯಾ: 2,850 ರಿಂಗಿಟ್ (50,544 ರುಪಾಯಿ)
- ದುಬೈ: 2162.50 ಡಿರಾಮ್ (48,898 ರುಪಾಯಿ)
- ಅಮೆರಿಕ: 595 ಡಾಲರ್ (49,459 ರುಪಾಯಿ)
- ಸಿಂಗಾಪುರ: 820 ಸಿಂಗಾಪುರ್ ಡಾಲರ್ (49,829 ರುಪಾಯಿ)
- ಕತಾರ್: 2,245 ಕತಾರಿ ರಿಯಾಲ್ (51,186 ರೂ)
- ಓಮನ್: 236.50 ಒಮಾನಿ ರಿಯಾಲ್ (51,058.46 ರುಪಾಯಿ)
- ಕುವೇತ್: 187 ಕುವೇತಿ ದಿನಾರ್ (50,321 ರುಪಾಯಿ)
Latest Trending
- ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸೆ. 25 ರಿಂದ ಚಾಲನೆ,
- 500 ಕೋಟಿ ವೆಚ್ಚದಲ್ಲಿ ಕರ್ನಾಟಕಕ್ಕೆ 1,020 ಹೊಸ ಬಸ್.
- ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು
Follow us on Instagram Bangalore Today