Get flat 10% off on Wonderla Entry Tickets | Use coupon code "BTWONDER".
Wayanad landslides: ಕೇರಳದ ವಯನಾಡ್ ಭೂಕುಸಿತ ದುರಂತಕ್ಕೆ: 275 ಸಾವು, 240 ನಾಪತ್ತೆ
Wayanad Landslides: ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ತನ್ನ ರುದ್ರರಮಣೀಯ ಭೂದೃಶ್ಯಗಳ ನೈಸರ್ಗಿಕ ಅದ್ಭುತಗಳ ನಿಧಿಯಾಗಿದ್ದ ಕೇರಳ ರಾಜ್ಯದ ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಎಂಬ ಅವಳಿ ಗ್ರಾಮಗಳಿಗೆ ಭೂಕುಸಿತಗಳು ಬಂದು ಅಪ್ಪಳಿಸಿದ್ದು 275 ಮಂದಿಯನ್ನು ಬಲಿಪಡೆದಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಂದಿ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕ ಮನೆಮಾಡಿದೆ.ನೆಲಸಮವಾಗಿರುವ ಮನೆಗಳು, ಜಖಂಗೊಂಡ ವಾಹನಗಳು, ಬಂಡೆಗಳು, ನೆಲಕ್ಕುರುಳಿರುವ ಬೃಹತ್ ಮರಗಳು ಮತ್ತು ಮಣ್ಣು ಮಿಶ್ರಿತ ನೀರು ಸುಂದರ ಗ್ರಾಮವನ್ನು ಸ್ಮಶಾನವನ್ನಾಗಿಸಿವೆ.
ಚೂರಲ್ಮಲಾ:ಭಾರತದ ದಕ್ಷಿಣ ರಾಜ್ಯವಾದ ಕೇರಳದಲ್ಲಿ ಮಾರಣಾಂತಿಕ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 275ಕ್ಕೆ ಏರಿಕೆಯಾಗಿದೆ ಮತ್ತು 240 ಮಂದಿ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಭೀಕರ ಭೂಕುಸಿತದಲ್ಲಿ ನೂರಾರು ಜನ ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಮುಂಡಕ್ಕೈ: ವಯನಾಡು ಜಿಲ್ಲೆಯ ಮುಂಡಕ್ಕೈ ಗ್ರಾಮದಲ್ಲಿ ಸುಮಾರು ಶೇ. 90 ರಷ್ಟು ಮನೆಗಳು ನಾಶವಾಗಿವೆ. 10ಅಡಿ ಎತ್ತರದವರೆಗೆ ಮಣ್ಣಿನಿಂದ ಅವೃತವಾಗಿದ್ದು, ರಕ್ಷಣಾ ಕಾರ್ಯಕರ್ತರು ಮುಂಡಕ್ಕೈನ ಪ್ರತಿಯೊಂದು ದೂರದ ಪ್ರದೇಶವನ್ನು ತಲುಪಿದ್ದು ಸಿಕ್ಕಿಬಿದ್ದ ಎಲ್ಲಾ ನಿವಾಸಿಗಳನ್ನು ರಕ್ಷಿಸಿದ್ದಾರೆ. ಸೇತುವೆ ಕೊಚ್ಚಿಹೋಗಿರುವುದರಿಂದ ಭಾರೀ ಯಂತ್ರೋಪಕರಣಗಳನ್ನು ಪ್ರದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ.
ಕಾಂಕ್ರೀಟ್ ಚಪ್ಪಡಿಗಳನ್ನು ಕತ್ತರಿಸಲು ಕಟ್ಟರ್, ಹಗ್ಗಗಳು ಮತ್ತು ಸಣ್ಣ ಉಪಕರಣಗಳನ್ನು ಬಳಸುತಿರುವುದಾಗಿ. ಕೆ9 ಸ್ಕ್ವಾಡ್ನ ಶ್ವಾನಗಳು ನಾಲ್ಕು ಸ್ಥಳಗಳನ್ನು ಗುರುತಿಸಲು ಸಹಾಯ ಮಾಡಿವೆ ಮತ್ತು ಕಾಣೆಯಾದವರನ್ನು ಹುಡುಕುವ ಸಲುವಾಗಿ ಅವಶೇಷಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಎಡಿಜಿಪಿ ಎಂ ಆರ್ ಅಜಿತ್ಕುಮಾರ್ ಅವರು ತಿಳಿಸಿದ್ದಾರೆ ಮತ್ತು ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮುಂಡಕ್ಕಿಯ ರೆಸಾರ್ಟ್ನಲ್ಲಿ ಸಿಲುಕಿದ್ದ 19 ಜನರನ್ನು ರಕ್ಷಿಸಿ ಪರಿಹಾರ ಕೇಂದ್ರಕ್ಕೆ ಕರೆತರಲಾಯಿತು.
ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಆ.6 ರವರೆಗೆ ಭಾರೀ ಮಳೆ ಮುನ್ಸೂಚನೆ! ರೆಡ್ ಅಲರ್ಟ್!
ಹಲವಾರು ತಂಡಗಳಿಂದ ರಕ್ಷಣಾ ಕಾರ್ಯಾಚರಣೆ
ಭಾರತೀಯ ಸೇನೆಯು ವಯನಾಡಿನಲ್ಲಿ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ಡಿಎಸ್ಸಿ ಸೆಂಟರ್ ಕಣ್ಣೂರಿನ ಸುಮಾರು 200 ಭಾರತೀಯ ಸೇನಾ ಸಿಬ್ಬಂದಿ ಮತ್ತು ಕೋಝಿಕ್ಕೋಡ್ನಿಂದ 122 ಟಿಎ ಬೆಟಾಲಿಯನ್ ಕೂಡ ಸ್ಥಳದಲ್ಲಿದೆ. ಇದರೊಂದಿಗೆ, ಎರಡು ವಾಯುಪಡೆಯ ಹೆಲಿಕಾಪ್ಟರ್ಗಳು, ಎಂಐ 17 ಮತ್ತು ಎಎಲ್ಹೆಚ್ ಸಹ ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸುತ್ತಿವೆ
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಪ್ರಕಾರ, ಅಗ್ನಿಶಾಮಕ ಮತ್ತು ರಕ್ಷಣಾ, ನಾಗರಿಕ ರಕ್ಷಣೆ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ತುರ್ತು ಹೊರತು ವಯನಾಡಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಿಎಂ ಪಿಣರಾಯಿ ವಿಜಯನ್ ಜನರಿಗೆ ಮನವಿ ಮಾಡಿದ್ದಾರೆ.ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಮುಂದಿನ ಸಂಬಂಧಿಕರಿಗೆ ₹2 ಲಕ್ಷ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಕೇರಳ ಬ್ಯಾಂಕ್ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಸಿಎಮ್ಡಿಆರ್ಎಫ್) 50 ಲಕ್ಷ ದೇಣಿಗೆ ನೀಡಿದರೆ, ಸಿಕ್ಕಿಂ ಮುಖ್ಯಮಂತ್ರಿ 2 ಕೋಟಿ ರೂ. ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 5 ಕೋಟಿ ರೂ. ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪರಿಹಾರದ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
Latest Trending
- ಬೆಂಗಳೂರು ಮಾಲ್ಗಳಿಗೆ ಶೀಘ್ರದಲ್ಲೇ ಹೊಸ ನಿಯಮ
- ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭ
- ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ಮಾರ್ಗದ ನಡುವೆ ಆ.6 ರಿಂದ ಮೆಟ್ರೋ ಪ್ರಾಯೋಗಿಕ ಚಾಲನೆ ಆರಂಭ!
- ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ನೋಡಿ
Follow us on Instagram Bangalore Today