Tungabhadra River Level Rise: ಮಳೆಯಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹಂಪಿ ಐತಿಹಾಸಿಕ ಸ್ಮಾರಕಗಳು ಜಲಾವೃತವಾಗಿವೆ.

Tungabhadra River Level Rise: ಮಳೆರಾಯನ ಆರ್ಭಟದಿಂದ ಎಲ್ಲಾ ನದಿಗಳು ಮತ್ತು ಕೆರೆಗಳು ತುಂಬಿ ಹರಿಯುತ್ತಿವೆ. ನಮ್ಮ ಮಲೆನಾಡು ಭಾಗದಲ್ಲಿ ಅನೇಕ ನದಿಗಳು ತೊರೆಯುತ್ತಿದ್ದು, ಹಂಪಿಯ ಭಾಗದ ತುಂಗಭದ್ರಾ ನದಿಯು ಅಪಾಯದ ಮಟ್ಟ ತಲುಪಿದೆ.

ಹಂಪಿಯ ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕಗಳು, ಪುರಂದರದಾಸರ ಮಂಟಪ, ಚಕ್ರತೀರ್ಥ, ವೈದಿಕ ಮಂಟಪ, ಜನಿವಾರ ಮಂಟಪ, ವಿಜಯನಗರದ ಅರಸರ ಕಾಲದ ಹಳೆಯ ಸೇತುವೆ ಮುಂತಾದ ತಾಣಗಳು ಜಲಾವೃತಗೊಂಡಿವೆ. ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಮತ್ತು ಕೋದಂಡ ರಾಮ ದೇವಸ್ಥಾನಕ್ಕೆ ಹೋಗುವ ಮಾರ್ಗಗಳು ಸ್ಥಗಿತಗೊಂಡಿವೆ.

Tungabhadra River Level Rise

ವಿಜಯನಗರ (ಹೊಸಪೇಟೆ): ತುಂಗಭದ್ರಾ ನದಿಯ ಮಟ್ಟ ಏರಿಕೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಕಂಗಾಲಾಗಿಸಿದೆ, ಆದರೆ ಇದರಿಂದ ಪ್ರವಾಸಿಗರು ಹಂಪಿಯ ಕಡೆಗೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಐತಿಹಾಸಿಕ ಸ್ಮಾರಕಗಳು ಜಲಾವೃತಗೊಂಡಿದ್ದು, ನದಿ ಮೈದುಂಬಿ ಹರಿದಾಗ ಮಾತಂಗ ಬೆಟ್ಟದ ಮೇಲಿನಿಂದ ಶ್ರೀ ವಿರೂಪಾಕ್ಷೇಶ್ವರ ಗೋಪುರ ಮತ್ತು ಇಬ್ಬಾಗದ ತೀರದ ಅತಿದೂರದವರೆಗೆ ಹರಿಯುವ ತುಂಗಭದ್ರೆಯ ರಮಣೀಯ ನೋಟವನ್ನು ಕಾಣಲು ಅನೇಕರು ಬೆಟ್ಟ ಏರುತ್ತಿದ್ದಾರೆ.

ಇದನ್ನೂ ಓದಿ: ಹೈಸ್ಪೀಡ್ ರೈಲು ಕೇವಲ 90 ನಿಮಿಷಗಳಲ್ಲಿ ಮೈಸೂರು-ಚೆನ್ನೈ ತಲುಪಲಿದೆ!

ಕಳೆದ ವರ್ಷ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ ಹಾಗೂ ನದಿಯಲ್ಲಿನೀರು ಇರದ ಕಾರಣ ಹೆಚ್ಚಿನ ಪ್ರವಾಸಿಗರು ಹಂಪಿಯತ್ತ ಸುಳಿದಿರಲಿಲ್ಲ. ಇದೀಗ ತುಂಗಭದ್ರಾ ಜಲಾಶಯ ಭರ್ತಿಯಾದೊಡನೆ ನದಿಗೆ ನೀರು ಹರಿಸಲಾಗುತ್ತಿದ್ದು, ನದಿ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ ಹಂಪಿಯಲ್ಲಿಪ್ರವಾಸಿಗರನ್ನು ಸೆಳೆಯುತ್ತಿದೆ ಹಂಪಿಯಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ವೈಭವವು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಹಂಪಿಯಲ್ಲಿರುವ ಕೋದಂಡ ರಾಮ ದೇವಸ್ಥಾನ ಮತ್ತು ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ಹೋಗುವ ಮಾರ್ಗ ಮುಳುಗಿದ್ದು, ಪ್ರವಾಸಿ ಪೊಲೀಸರಿಂದ ಬಾರಿಕೇಡ್ ಅಳವಡಿಸಿ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಹಂಪಿಯಲ್ಲಿ ತುಂಗಭದ್ರಾ ನದಿ ಅಪಾಯದಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಸಿಗರು ನದಿ ತೀರಕ್ಕೆ ತೆರಳದಂತೆ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೋಟಿಲಿಂಗ ಮುಳಗಡೆ:

ಹಂಪಿಯ ಸ್ಮಾರಕಗಳು, ದೇವಾಲಯಗಳ ಪೈಕಿ ನದಿ ದಡದಲ್ಲಿರುವ ಸ್ನಾನಘಟ್ಟ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ, ವೈದಿಕ ಮಂಟಪ, ಜನಿವಾರ ಮಂಟಪ, ಹಾಗೂ ಪುರಂದರ ದಾಸರ ಮಂಟಪ, ವಿಜಯನಗರ ಅರಸರ ಕಾಲದ ಸೇತುವೆ. ಕೋಟಿಲಿಂಗ ನದಿ ನೀರಿನಲ್ಲಿಮುಳಗಡೆಯಾಗಿವೆ. ಜಲಾವೃತವಾಗಿರುವ ಕೆಲ ಸ್ಮಾರಕಗಳ ಮೇಲ್ಭಾಗಗಳು ಮಾತ್ರ ಕಾಣಿಸುತ್ತಿವೆ.

Latest Trending

Follow us on Instagram Bangalore Today

Chethan M S
Chethan M S
Articles: 7

Leave a Reply

Your email address will not be published. Required fields are marked *