Peenya Flyover: ಪೀಣ್ಯ ಮೇಲ್ಸೇತುವೆ ಜು. 29 ರಿಂದ ಓಡಾಟಕ್ಕೆ ಅವಕಾಶ; ವೇಗದ ಮಿತಿ ಮೀರಿದರೆ ಬೀಳಲಿದೆ ದಂಡ!

Peenya Flyover: ಪೀಣ್ಯ ಮೇಲ್ಸೇತುವೆ ಮೇಲೆ ಚಾಲನೆಗೆ ಅವಕಾಶ ಎದುರು ನೋಡುತ್ತಿರುವಂತಹ ಭಾರಿ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ಚಾಲಕರಿಗೆ ಜುಲೈ 29 ರಿಂದ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ವಾಹನ ಸವಾರರ ಸುರಕ್ಷತೆಯ ಸಲುವಾಗಿ ಪೊಲೀಸರು ಅತಿ ವೇಗದ ಮಿತಿ ಮೀರಿ ಚಲಾಯಿಸುವಂತಹ ವಾಹನಗಳಿಗೆ ದಂಡ ವಿಧಿಸಲು ಸಜ್ಜಾಗಿದ್ದಾರೆ.

Peenya Flyover

Bengaluru: ಪೀಣ್ಯ ಮೇಲ್ಸೇತುವೆ ಆಮೇಲೆ ಭಾರಿ ಗಾತ್ರದ ವಾಹನಗಳಿಗೆ ಓಡಾಟಕ್ಕೆ ಅವಕಾಶ ಯಾವಾಗ ದೊರೆಯುವುದು ಎಂಬ ಕಾತುರ ಬೆಂಗಳೂರಿನಲ್ಲಿತ್ತು ಇದೀಗ ಎಲ್ಲಾ ಬಗೆಯ ವಾಹನ ಸವಾರರಿಗೆ ಗುಡ್ ನ್ಯೂಸ್ ದೊರೆತಿದೆ, ಹೌದು ಇದೆ ಜೂಲೈ 29 ರಿಂದ ಪೀಣ್ಯ ಮೇಲ್ಸೇತುವೆ ಮೇಲೆ ಸೇರಿದಂತೆ ಎಲ್ಲಾ ಬಗೆಯ ವಾಹನಗಳನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಐಐಎಸ್ ಸಿ ಅಧ್ಯಯನದ ಬಳಿಕ ಘನ ವಾಹನಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ದೊರೆತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆದರೆ, ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೆರೆ ಕಾಲುವೆ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲು ಬಿಬಿಎಂಪಿ ಆದೇಶ. ಇಲ್ಲಿದೆ ಮಾಹಿತಿ.

ಜುಲೈ 29 ರಿಂದ ಎಲ್ಲಾ ಬಗೆಯ ವಾಹನಗಳಿಗೆ ಹೋರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದರು ಇನ್ನೂ ಕೂಡ ಪ್ಲೇ ಓವರ್ ನಲ್ಲಿ ಹಲವರು ಕಾಮಗಾರಿಗಳು ಬಾಕಿ ಉಳಿದಿವೆ, ಪೀಣ್ಯ ಮೇಲ್ಸೇತುವೆಗಳಿಗೆ ಈಗಾಗಲೇ ಎರಡು ಕೇಬಲ್ ಗಳನ್ನು ಅಳವಡಿಸಲಾಗಿದ್ದು ಅದಕ್ಕೆ ಸಿಮೆಂಟಿಂಗ್ ಮಾಡ ಬೇಕಾಗಿದೆ. ಹೀಗಾಗಿ ಈ ವಿಶೇಷ ಕಾಮಗಾರಿ ಪೂರ್ಣವಾಗದಿದ್ದರೂ ಭಾರಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು ಪೊಲೀಸರಿಂದ ಅತಿ ವೇಗದ ವಾಹನ ಚಾಲನೆ ಒಳಗೊಂಡಂತೆ ಹಲವಾರು ಕಡಿವಾಣಗಳನ್ನು ಹಾಕಲಾಗಿದೆ.

ಐಐಎಸ್ಸಿ ತಜ್ಞರ ಪ್ರಕಾರ ಪೀಣ್ಯ ಮೇಲ್ಸೇತುವೆ ಮೇಲೆ ವಾಹನ ಸವಾರರು 40 ರಿಂದ 50ರ ಗರಿಷ್ಠ ವೇಗದ ಮಿತಿಯಲ್ಲಿ ವಾಹನವನ್ನು ಚಲಾಯಿಸಬೇಕು ಎಂದು ತಿಳಿಸಿದ್ದಾರೆ ಹಾಗೂ ಕಾಮಗಾರಿಗಳು ನಡೆಯುತ್ತಿರುವುದರಿಂದ ವಾಹನಗಳು ಅತಿ ವೇಗವಾಗಿ ಚಲಾಯಿಸಿದರೆ ವೈಬ್ರೇಶನ್ ಸಮಸ್ಯೆ ಉಂಟಾಗಬಹುದು ಇದರಿಂದ ಕಾಮಗಾರಿಗೆ ಅಡ್ಡಿಯಾಗಬಹುದು ಎಂದು ವೇಗದ ವಾಹನ ಚಾಲನೆಗೆ ಕಡಿವಾಣ ಹಾಕಲಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *