Get flat 10% off on Wonderla Entry Tickets | Use coupon code "BTWONDER".
KRS Garden Upgrading: KRS ಬೃಂದಾವನ ಮೇಕ್ ಓವರ್ ಗೆ ಕ್ಯಾಬಿನೆಟ್ ಸಮ್ಮತಿ: ಏನನ್ನು ನಿರೀಕ್ಷಿಸಬಹುದು?
KRS Garden Upgrading: ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕೆಆರ್‌ಎಸ್ ಬೃಂದಾವನವನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ ನೀಡಿದ್ದು, ಅದರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಲು ಬರೋಬ್ಬರಿ 2,633 ಕೋಟಿ ರೂ. ವೆಚ್ಚದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಗೆ ಒಪ್ಪಿಗೆ ಕೊಟ್ಟಿದೆ.
ಆಧುನಿಕ ಸೌಕರ್ಯಗಳನ್ನು ಸೇರಿಸಿ, ವಾಟರ್ ಸ್ಟೋಟ್ಟ್, ಹೆಲಿಪ್ಯಾಡ್, ಫೈವ್ ಸ್ಟಾರ್ ಹೊಟೇಲ್, ಫ್ಲಾಜಾ, ಗ್ರ್ಯಾಂಡ್ ವೆಲ್ ಕಮ್ ಆರ್ಚ್, ಮಕ್ಕಳಿಗಾಗಿ ಸ್ಪೆಷಲ್ ಚಿಲ್ಡ್ರನ್ ಪಾರ್ಕ್ ಸೇರಿ ಹಲವು ವೈಶಿಷ್ಟ್ಯ ಹೊಂದಿರುವಂತೆ KRS ಬೃಂದಾವನ ಅಭಿವೃದ್ಧಿಗೆ ಪ್ಲ್ಯಾನ್ ಮಾಡಲಾಗಿದ್ದು ಪ್ರವಾಸಿಗರು ಪ್ರಕೃತಿಯ ವೈಭವ ಮತ್ತು ಆಧುನಿಕ ಐಷಾರಾಮಿಗಳ ನಡುವೆ ಮರೆಯಲಾಗದ ಅನುಭವವನ್ನು ಎದುರುನೋಡಬಹುದಾಗಿದೆ.
Mandya: ಮಂಡ್ಯ ಜಿಲ್ಲೆಯಲ್ಲಿರುವ ಈ ಉದ್ಯಾನವನ, ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ. ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಗಿ 1932 ರಲ್ಲಿ ಪೂರ್ಣಗೊಂಡಿತು.ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳವಾಗಿದ್ದು ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ.
ಈ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಕೃಷ್ಣರಾಜಸಾಗರ ಜಲಾಶಯದ ಅಡಿಯಲ್ಲಿರುವ 198 ಎಕರೆ ಪ್ರದೇಶದ ಸಮಗ್ರ ಸೌಂದರ್ಯೀಕರಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಟೆಂಡರ್ ಕರೆಯುವ ಪ್ರಸ್ತಾವನೆಗೆ ಸಂಪುಟ ಉದ್ದೇಶಿಸಲಾಗಿದ್ದು ಈಗಾಗಲೇ ನೀಡಿರುವ ಅನುಮೋದನೆಯಂತೆ ಟೆಂಡರ್ ಕರೆಯುವ ಪ್ರಸ್ತಾವನೆಗೆ ಅನುಮೋದಿಸಿದೆ.
ಇದನ್ನೂ ಓದಿ: ಮಳೆಯಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹಂಪಿ ಐತಿಹಾಸಿಕ ಸ್ಮಾರಕಗಳು ಜಲಾವೃತವಾಗಿವೆ.
ಮಹತ್ವದ ಕ್ರಮದಲ್ಲಿ, ಕೃಷ್ಣರಾಜಸಾಗರ ಅಣೆಕಟ್ಟಿನ ಬೃಂದಾವನ ಉದ್ಯಾನವನವನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಉನ್ನತೀಕರಣಗೊಳಿಸುವ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಯನ್ನು ಆರ್ಥಿಕ ಇಲಾಖೆ, ಯೋಜನಾ ಇಲಾಖೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಪರಿಷ್ಕರಿಸಿ ಟೆಂಡರ್ ಮುಖಾಂತರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.ಒಟ್ಟು ಯೋಜನಾ ವೆಚ್ಚ ರೂ.2663.74 ಕೋಟಿ. 34.5 ವರ್ಷಗಳ ಒಟ್ಟು ರಿಯಾಯಿತಿ ಅವಧಿಯು 4.5 ವರ್ಷಗಳ ರಿಯಾಯಿತಿ ಅವಧಿಯು ಸೇರಿದೆ. ಮಾಸ್ಟರ್ ಪ್ಲಾನ್ನಲ್ಲಿ ಒಟ್ಟು 45 ಘಟಕಗಳನ್ನು ಪರಿಗಣಿಸಲಾಗಿದೆ ಎಂದು ವಿವರ ನೀಡಿದರು.
KRS ಬೃಂದಾವನ ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ ಗೊತ್ತಾ?
ಕೆಆರ್ಎಸ್ ಸರ್ಕಲ್ ವಿಸ್ತರಣೆ, ಟೋಲ್ ಗೇಟ್, ವಾಹನಗಳ ಪಾರ್ಕಿಂಗ್, ವಿಸ್ತಾರವಾದ ಪಾದಚಾರಿ ಮಾರ್ಗ, ಬೋಟಿಂಗ್ ಲೇಕ್, ಆ್ಯಂಪಿಥಿಯೇಟರ್, ಕಾವೇರಿ ಪ್ರತಿಮೆ, ವಿಶಾಲವಾದ ಸ್ವಾಗತ ಕಮಾನು, ಮೀನಾ ಬಜಾರ್, ಜಂಗಲ್ ಟ್ರ್ಯಾಕ್, ಡೋಲ್ ಮ್ಯೂಸಿಯಂ, ಪೆಂಗ್ವಿನ್ ಪಾರ್ಕ್, ಇಂಡೋರ್ ಅಮ್ಯೂಸ್ ಮೆಂಟ್ ಪಾರ್ಕ್, ಗಾಜಿನ ಮೇಲ್ಸೇತುವೆ ಇರಲಿದೆ.
ಜೊತೆಗೆ ವ್ಯಾಕ್ಸ್ ಮ್ಯೂಸಿಯಂ, ಅರೋಮ ಗಾರ್ಡನ್ ಮತ್ತು ಮಕ್ಕಳಿಗಾಗಿ ವಿಶೇಷ ಪಾರ್ಕ್, ಪ್ಯಾರಾ ಸೇಲಿಂಗ್, ವಾಟರ್ ಪ್ಲೇನ್, ಬೊಟಾನಿಕಲ್ ಗಾರ್ಡನ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಹೆಲಿಪ್ಯಾಡ್, ಜೈ ಓಹೋ ಫೌಂಟನ್ ಸೇರಿದಂತೆ ಹಲವು ವೈಶಿಷ್ಟ್ಯ ಹೊಂದಿರುವಂತೆ ನಿರ್ಮಿಸಲಾಗುವುದು.
Latest Trending
- ಹೈಸ್ಪೀಡ್ ರೈಲು ಕೇವಲ 90 ನಿಮಿಷಗಳಲ್ಲಿ ಮೈಸೂರು-ಚೆನ್ನೈ ತಲುಪಲಿದೆ!
- ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ
- ಪೀಣ್ಯ ಮೇಲ್ಸೇತುವೆ ಜು. 29 ರಿಂದ ಓಡಾಟಕ್ಕೆ ಅವಕಾಶ; ವೇಗದ ಮಿತಿ ಮೀರಿದರೆ ಬೀಳಲಿದೆ ದಂಡ!
Follow us on Instagram Bangalore Today