Get flat 10% off on Wonderla Entry Tickets | Use coupon code "BTWONDER".
BMTC Electric bus: ಬೆಂಗಳೂರು ನಾಗವಾರ – ಹೆಬ್ಬಾಳ ಸರ್ವೀಸ್ ರಸ್ತೆಯ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗೆ ಬೆಂಕಿಗೆ ಆಹುತಿ
BMTC Electric bus: ಆಘಾತಕಾರಿ ಘಟನೆಯೊಂದರಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಸೋಮವಾರ ರಾತ್ರಿ ಮಳೆಯ ನಡುವೆ ನಾಗವಾರ – ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ಹೊತ್ತಿ ಉರಿದಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆಯ ನಡುವೆಯೇ ಮಾನ್ಯತಾ ಟೆಕ್ ಪಾರ್ಕ್ ಬಳಿಯ ನಾಗವಾರ-ಹೆಬ್ಬಾಳ ಸರ್ವೀಸ್ ರಸ್ತೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗೆ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ರಾತ್ರಿ ಸುರಿದ ಮಳೆಯಿಂದ ಜಲಾವೃತಗೊಂಡಿದ್ದ ಸರ್ವೀಸ್ ರಸ್ತೆಯಲ್ಲಿ ಹೊಗೆ ಉಗುಳುತ್ತಿದ್ದ ಬಸ್ ಹಠಾತ್ ಸ್ಥಗಿತಗೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಚಾಲಕ ಪ್ರೇರೇಪಿಸಿದರು.
ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡ ಬಸ್, ಅಗ್ನಿಶಾಮಕ ದಳ ಬರುವ ಮೊದಲೇ ಬೂದಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗೆ ಬೆಂಕಿ ಹೊತ್ತಿಕೊಂಡ ಅಗ್ನಿ ಅವಘಡದಿಂದ ನಾಗವಾರ ಜಂಕ್ಷನ್ನಿಂದ ಲುಂಬಿನಿ ಗಾರ್ಡನ್ವರೆಗೆ, ಸುಮಾರು 3 ಕಿಲೋಮೀಟರ್ ದೂರದವರೆಗೆ, ಟ್ರಾಫಿಕ್ ಜಾಮ್ ಆಗಿದ್ದು, ಇಕ್ಕಟ್ಟಾದ ರಸ್ತೆಗಳು ಅಗ್ನಿಶಾಮಕ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ತಡವಾಗಿ ತೆರಳಲು ಕಾರಣವಾಗಿವೆ.
ಮಳೆಯಿಂದ ಅವಾಂತರಗಳು:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ವಿದ್ಯಾಪೀಠ ವ್ಯಾಪ್ತಿಯಲ್ಲಿ 96 ಮಿ.ಮೀ. ಮಳೆ ದಾಖಲಾಗಿದೆ. ಇನ್ನು ಮಳೆಯ ಅಬ್ಬರಕ್ಕೆ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಮಾಗಡಿ ರಸ್ತೆ, ನಾಗರಬಾವಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಪರ್ಕಿಸುವ ನಾಯಂಡಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯ ದುಸ್ಥಿತಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವೇಗದ ಚಾಲನೆಗೆ ಬ್ರೇಕ್: ನಿಯಮ ಉಲ್ಲಂಘಿಸಿದರೆ ಕೇಸ್
ಬೆಂಗಳೂರು ಉತ್ತರ ಭಾಗದ ಏರ್ಪೋರ್ಟ್ ರಸ್ತೆ ಭಾರಿ ಮಳೆಯಿಂದಾಗಿ ನದಿಯಂತೆ ಪರಿವರ್ತನೆಯಾಗಿತ್ತು. ಮೊಣಕಾಲುದ್ದ ನೀರು ನಿಂತಿದ್ದು ವಾಹನ ಸವಾರರು ಟ್ರಾಫಿಕ್ ಜಾಮ್ನಿಂದಾಗಿ ಪರದಾಡುವಂತಾಯ್ತು.
ಬನಶಂಕರಿ 1ನೇ ಹಂತದಲ್ಲಿ ಮರದ ಬೃಹತ್ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಕೊಂಬೆ ಬಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಅಪಾಯ ತಪ್ಪಿದೆ.
ಅಂಡರ್ ಪಾಸ್ನಲ್ಲಿ ಸಿಲುಕಿದ ಕಂಟೆನರ್:
ಮಹಾರಾಣಿ ಕಾಲೇಜು ಕೆಳಸೇತುವೆಯಲ್ಲಿ ಕಂಟೈನರ್ ವಾಹನವೊಂದು ಸಿಲುಕಿಕೊಂಡಿದ್ದು, ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಂಟೈನರ್ ಅನ್ನು ಅಂಡರ್ ಪಾಸ್ನಿಂದ ಹೊರತೆಗೆದು, ಚಾಲಕ ಹರಸಾಹಸಪಟ್ಟಿದ್ದು, ಟಯರ್ ಬ್ಲೋ ತೆಗೆದು, ವಾಹನ ಪಾರು ಮಾಡಿದ್ದಾನೆ. ಅಂತಿಮವಾಗಿ ಅಂಡರ್ಪಾಸ್ನಿಂದ ಹೊರತೆಗೆಯಲಾಗಿದೆ.
Latest Trending
- ಬೆಂಗಳೂರು ಬಳಿ ವಿಶೇಷ ನಗರ KHIR ನಿರ್ಮಾಣಕ್ಕೆ ಆ.23ಕ್ಕೆ ಚಾಲನೆ!
- ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿಲ್ಲ!
- ಬೆಂಗಳೂರು ಸಂಚಾರಿ ಪೊಲೀಸರಿಂದ ಭಾರಿ ವಾಹನಗಳ ಓಡಾಟದ ಸಮಯದಲ್ಲಿ ಬದಲಾವಣೆ
- ಮಂಗಳೂರು ಬೆಂಗಳೂರು ರೈಲು ಸಂಚಾರ ಮತ್ತಷ್ಟು ವಿಳಂಬ , ಇಲ್ಲಿದೆ ಸಂಪೂರ್ಣ ಮಾಹಿತಿ.
Follow us on Instagram Bangalore Today