Get flat 10% off on Wonderla Entry Tickets | Use coupon code "BTWONDER".
Mysore: ಮೇಲ್ವಿಚಾರಕಿ ವಿಚಾರಣೆ, ಕರ್ತವ್ಯ ಲೋಪವಿಲ್ಲ ಎಂಬ ದೃಢೀಕರಣ.
Mysore: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು/ವೃತ್ತದ ತಂದ್ರೆ ಗ್ರಾಮದ ಅಂಗನವಾಡಿಯಲ್ಲಿ ಶುಕ್ರವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮೇಲ್ವಿಚಾರಕ್ಕೆ ಶೋಭಾ ಅವರು ಇಂದು ತಂದ್ರೆ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿಕರ್ತವ್ಯ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಂಜೆ ತಂದ್ರೆ ಗ್ರಾಮದ ಕಾರ್ಯಕರ್ತೆ ಮಮತಾ ರವರು ಇಬ್ಬರು ಸಹಾಯಕರು ರಜೆಯಲ್ಲಿದ್ದ ಕಾರಣ ಅಂಗನವಾಡಿ ಮಕ್ಕಳಿಗೆ ಕಡ್ಲೆಬೀಜ ಚಿಕ್ಕಿ ಅಥವಾ ಮಿಠಾಯಿ ತಯಾರಿಸಲು 250 ಗ್ರಾಂ ಕಡ್ಲೆ ಬೀಜವನ್ನು ಮನೆಯಲ್ಲಿ ತಯಾರಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದ ಕಾರಣ ಸಹಾಯಕಿ ಕುತಂತ್ರದಿಂದ ಜನರ ಬಳಿ ಸಿಕ್ಕಿದ್ದರು.
ಇದನ್ನೂ ಓದಿ; ನೇಪಾಳದಲ್ಲಿ ಭೂಕಂಪ ಸಂಕಷ್ಟ ಸಾವಿನ ಲೆಕ್ಕ 128ಕ್ಕೆ ಏರಿಕೆ!
ಘಟನೆಯ ಸತ್ಯತೆಯನ್ನು ತಿಳಿಯಲು ಸ್ಥಳಕ್ಕೆ ಮೇಲ್ವಿಚಾರಕಿ ಶೋಭಾ ಇಂದು ಭೇಟಿ ನೀಡಿ ಕಾರ್ಯಕರ್ತ ಮತ್ತು ಸಮಿತಿಯ ಮುಂದೆ ವಿಚಾರಿಸದರು.
ಒಂದಕ್ಕಿಂತ ಹೆಚ್ಚು ಅಂಗನವಾಡಿಯನ್ನು ಕಾರ್ಯಕರ್ತೆಯು ಪ್ರಭಾರ ವಹಿಸಿದ್ದು ಮತ್ತು ಸಹಾಯಕಿಯರು ರಜೆಯಲ್ಲಿದ್ದ ಕಾರಣ ಮಿಟಾಯಿ ತಯಾರಿಸಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ಸಮಿತಿ ಮತ್ತು ಮೇಲ್ವಿಚಾರಕ ಘಟನೆ ವಿಚಾರ ಸ್ಪಷ್ಟ ಪಡಿಸಿದ್ದಾರೆ.
Latest Trending
- ಬಿಎಂಟಿಸಿಯ ಶೇ. 50% ರಷ್ಟು ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ: JICSR ವರದಿ
- ಬೆಂಗಳೂರಿಗರೇ ಎಚ್ಚರ! 3 ದಿನಗಳಿಂದ ನಗರದಲ್ಲಿ ಚಿರತೆಯೊಂದು ಬೀಡುಬಿಟ್ಟಿದೆ.
Follow us on Instagram Bangalore Today