Karnataka Housing scheme: ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ

Karnataka Housing scheme: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮಹತ್ವಾಕಾಂಕ್ಷೆಯ ಒಂದು ಲಕ್ಷ ವಸತಿ ಯೋಜನೆಯ ಸಾವಿರಾರು ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.  ಫಲಾನುಭವಿಗಳ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

Karnataka Housing scheme

ಬೆಂಗಳೂರು : ಮುಖ್ಯಮಂತ್ರಿಗಳ ಈ ನಿರ್ಧಾರವು ಹೆಚ್ಚಿದ ಆರ್ಥಿಕ ಹೊರೆಯನ್ನು ನಿಭಾಯಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸ್ವಾಗತಾರ್ಹ ಪರಿಹಾರವನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಪ್ರಮುಖ ಪ್ಯಾಕೇಜ್ ಇದಾಗಿದ್ದು.  

ಬಿಜೆಪಿ ಸರ್ಕಾರ ದಲ್ಲಿ ಯೂನಿಟ್ ವೆಚ್ಚ ಹೆಚ್ಚಳ ನಿರ್ಧಾರ ದಿಂದ ಆತಂಕ ಗೊಂಡಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಮನೆಗೆ ಒಂದು ಲಕ್ಷ ರೂ. ನಂತೆ 121 ಕೋಟಿ 53 ಲಕ್ಷ ರೂ.ಸರ್ಕಾರವೇ ಭರಿಸಲು ಒಪ್ಪಿಗೆ ನೀಡಿದ್ದಾರೆ.

ವಸತಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಗುರುವಾರ ಸಂಜೆ ವಿಧಾನ ಸೌಧದ ಮುಖ್ಯಮಂತ್ರಿ ಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಯವರ ಮನವೊಲಿಸುವಲ್ಲಿ ಯಶಸ್ವಿಯಾದರು. ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆ ಗೆ 2017, ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರೂ. ನಿಗದಿ ಮಾಡಲಾಗಿತ್ತು.

ವೆಚ್ಚಗಳ ವಿಭಜನೆಯು ಈ ಕೆಳಗಿನಂತಿರುತ್ತದೆ:

  • ಕೇಂದ್ರ ಸರ್ಕಾರ: 1.50 ಲಕ್ಷ ರೂ
  • ರಾಜ್ಯ ಸರ್ಕಾರ: ರೂ 1.20 ಲಕ್ಷ (ಸಾಮಾನ್ಯ ವರ್ಗ), ರೂ 2 ಲಕ್ಷ (ಎಸ್‌ಸಿ-ಎಸ್‌ಟಿ ವರ್ಗ)
  • ಬಿಜೆಪಿ ಸರ್ಕಾರದ ಹಿಂದಿನ ಘಟಕ ವೆಚ್ಚ (ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ): 10.60 ಲಕ್ಷ ರೂ.

 ಇದಕ್ಕೆ ಜಿಎಸ್‌ಟಿಗೆ ಹೆಚ್ಚುವರಿ ಸೇರಿಸಿ 60,000, ಒಟ್ಟು 11.20 ಲಕ್ಷ ರೂ

ಇಷ್ಟು ಮೊತ್ತ ಭರಿಸಲು ಕಷ್ಟ ಎಂದು ಫಲಾನುಭವಿಗಳು ಸಚಿವರ ಬಳಿ ಮನವಿ ಮಾಡಿಕೊಂಡಿದ್ದರು. ಇದೀಗ ಸರ್ಕಾರದ ಮಹತ್ವದ ತೀರ್ಮಾನದಿಂದ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗ 7.50 ಲಕ್ಷ, ಎಸ್ ಸಿ -ಎಸ್ ಟಿ ವರ್ಗ 6.70 ಲಕ್ಷರೂ.ಕಟ್ಟಬೇಕಾಗುತ್ತದೆ. ಇದರಿಂದ 12,153 ಕುಟುಂಬ ಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಪೀಣ್ಯ ಮೇಲ್ಸೇತುವೆ ಜು. 29 ರಿಂದ ಓಡಾಟಕ್ಕೆ ಅವಕಾಶ; ವೇಗದ ಮಿತಿ ಮೀರಿದರೆ ಬೀಳಲಿದೆ ದಂಡ!

ಪರಿಷ್ಕೃತ ಘಟಕ ವೆಚ್ಚಗಳು ಇಂತಿವೆ: 

  • ಸಾಮಾನ್ಯ ವರ್ಗಕ್ಕೆ 8.50 ಲಕ್ಷ ರೂ., ಈಗ 7.50 ಲಕ್ಷರೂ., 
  • ಎಸ್‌ಸಿ-ಎಸ್‌ಟಿ ವರ್ಗಕ್ಕೆ 7.70 ಲಕ್ಷ ರೂ. ನಿಂದ 6.70 ಲಕ್ಷರೂ

ಈ ತೀರ್ಮಾನ 2020 ರಲ್ಲಿ ಘಟಕ ವೆಚ್ಚ ಹೆಚ್ಚಳ ತೀರ್ಮಾನದ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡಿರುವ 12,153 ಮಂದಿಗೆ ಮಾತ್ರ ಅನ್ವಯವಾಗಲಿದೆ. ಇಂದಿನ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್. ಟಿ. ಸೋಮಶೇಖರ್, ಎಸ್. ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ. ಕೃಷ್ಣಪ್ಪ, ಮುನಿರಾಜು,ಶಿವಣ್ಣ ಪಾಲ್ಗೊಂಡಿದ್ದರು.

ಕಡಿಮೆಯಾದ ಘಟಕ ವೆಚ್ಚವು ಫಲಾನುಭವಿಗಳಿಗೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಮನೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಅವರ ಮನೆ ಮಾಲೀಕತ್ವದ ಕನಸನ್ನು ನನಸಾಗಿಸಲು ನೆರವಾಗುತ್ತದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *